Site icon PowerTV

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ; ತಂದೆ-ಮಗನ ಬಂಧನ

ಬೆಂಗಳೂರು : ಐದು ವರ್ಷದ ಬಾಲಕಿಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ತಂದೆ ಮತ್ತು ಮಗ ಘಟನೆ ನಗರದ ಸುಂಕದಕಟ್ಟೆ ಚಂದನ ಲೇಔಟ್​ನಲ್ಲಿ ನಡೆದಿದೆ.

ದೌರ್ಜನ್ಯ ಎಸಗಿರುವ ಈ ಆರೋಪಿಗಳು ಸಂತ್ರಸ್ತೆಯ ತಾಯಿಯ ಸಂಬಂಧಿಕರಾಗಿದ್ದರು. ಈ ಹಿನ್ನೆಲೆ ತಾಯಿ ಕೆಲಸಕ್ಕೆ ಹೋಗುವ ವೇಳೆ ಐದು ವರ್ಷದ ಮಗುವನ್ನು ಸಂಬಂಧಿಕನಾದ ಆರೋಪಿ ನಾಗರಾಜ್ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು. ತಾಯಿ ಬಾಲಕಿಯನ್ನು ಆರೋಪಿ ನಾಗರಾಜ್ ಮನೆಯಲ್ಲಿ ಬಿಟ್ಟು ತೆರಳಿದಾಗ, ಮಗುವಿನ ಮೇಲೆ ತಂದೆ ಮತ್ತು 17 ವರ್ಷದ ಅವನ ಮಗ ಇಬ್ಬರು ಸೇರಿ ಲೈಗಿಂಕ ದೌರ್ಜನ್ಯ ಎಸಗಿದ್ದಾರೆ.

ಇದನ್ನು ಓದಿ : 1 ಗಂಟೆ ಪೋಲಿಸ್ ಅಧಿಕಾರಿಯಾದ 8 ವರ್ಷದ ಬಾಲಕ

ಇತ್ತೀಚೆಗೆ ಬಾಲಕಿಯ ವರ್ತನೆಯಲ್ಲಿ ಕೆಲವು ಬದಲಾವಣೆಯಾದ ಕಾರಣ ತಾಯಿ ಆಕೆಯನ್ನು ವಿಚಾರಿಸಿದ್ದಾರೆ. ಈ ವೇಳೆ ಬಾಲಕಿಯು ನಡೆದಿರುವ ಘಟನೆ ಬಗ್ಗೆ ವಿವರಿಸಿದ್ದಾಳೆ. ಬಳಿಕ ನಿನ್ನೆ ಬಾಲಕಿಗೆ ಇನ್ಪೆಕ್ಷನ್ ಆಗಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋದ ತಾಯಿ. ಬಳಿಕ ವೈದ್ಯಕೀಯ ಪರೀಕ್ಷೆಯಲ್ಲಿ ನಿರಂತರವಾಗಿ ಲೈಗಿಂಕ ದೌರ್ಜನ್ಯ ನಡೆಸಿರುವುದು ಖಚಿತವಾಗಿದೆ.

ಈ ಘಟನಾ ಸಂಬಂಧ ಕಾಮಾಕ್ಷಿಪಾಳ್ಯ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿ ನಾಗರಾಜ್ ಮತ್ತು ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದಿರುವ ಪೋಲಿಸರು.

Exit mobile version