Site icon PowerTV

ಹಿಂದೂ ಧರ್ಮದ ಬಗ್ಗೆ ಮಾತಾಡಿದ್ರೆ, MM ಕಲ್ಬುರ್ಗಿ, ಗೌರಿ ಲಂಕೇಶ್ ರೀತಿ ಹತ್ಯೆ ಮಾಡ್ತೀವಿ!

ಬೆಂಗಳೂರು : ರಾಜ್ಯದ ಹಲವು ಸಾಹಿತಿಗಳು, ಹೋರಾಟಗಾರರಿಗೆ ಮತ್ತೆ ಬೆದರಿಕೆ ಪತ್ರ ರವಾನಿಸಲಾಗಿದೆ.

ಹಿಂದೂ ಧರ್ಮದ ಬಗ್ಗೆ ಮಾತನಾಡಿದ್ರೆ, MM ಕಲ್ಬುರ್ಗಿ, ಗೌರಿ ಲಂಕೇಶ್ ರೀತಿ ಹತ್ಯೆ ಮಾಡ್ತೀವಿ ಎಂದು 15 ಮಂದಿ ಸಾಹಿತಿಗಳಿಗೆ ಬೆದರಿಕೆ ಪತ್ರ ರವಾನಿಸಲಾಗಿದೆ.

ಪ್ರೊ.ಎಸ್.ಜಿ ಸಿದ್ದರಾಮಯ್ಯ, ಕೆ. ಮರುಳಸಿದ್ದಪ್ಪ, ಕುಂ. ವೀರಭದ್ರಪ್ಪ, ವಸುಂಧರಾ ಭೂಪತಿ, ಬರಗೂರು ರಾಮಚಂದ್ರಪ್ಪ ಸೇರಿ ಇತರರ ಹೆಸರು ಪಟ್ಟಿಯಲ್ಲಿವೆ. ಇನ್ನೂ, ಈ ಸಂಬಂಧ ಬುದ್ದಿಜೀವಿಗಳು ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರಿಗೆ ದೂರು ನೀಡಿದ್ದು, ಸೂಕ್ತ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ.

ಕೋಮುವಾದ, ಜಾತಿವಾದ, ಮೌಡ್ಯವಿರೋಧಿ ನಿಲುವುಳ್ಳ ಸಾಹಿತಿಗಳು ಹಾಗೂ ಬುದ್ಧಿಜೀವಿಗಳಿಗೆ 2022ರ ಜೂನ್‌ ನಿಂದ ಪತ್ರದ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಇದರಿಂದ, ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಮಾನಸಿಕ ಹಿಂಸೆಗೊಳಗಾಗಿದ್ದು, ಯಾವ ಸಂದರ್ಭದಲ್ಲಾದರೂ ತಮ್ಮ ಮೇಲೆ ದಾಳಿಯಾಗಬಹುದು ಎಂದು ಗೃಹ ಸಚಿವರಿಗೆ ಪತ್ರ ಬರೆಯಲಾಗಿದೆ.

Exit mobile version