Site icon PowerTV

ಚಿನ್ನದ ವ್ಯಾಪಾರಿ ಮತ್ತು ಆತನ ಪತ್ನಿಗೆ ಚಾಕು ಇರಿತ!

ಮೈಸೂರು : ಹಾಡಹಗಲೇ ಚಿನ್ನದ ವ್ಯಾಪಾರಿ ಮತ್ತು ಆತನ ಪತ್ನಿಯ  ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಹೂಟಗಳ್ಳಿಯ ಕೆಎಚ್ ಬಿ ಕಾಲೋನಿಯಲ್ಲಿ ನಡೆದಿದೆ.

ಬಾಬುರಾವ್ (57), ಪತ್ನಿ ಕಮಲಬಾಯಿ (52) ಚಾಕು ಇರತಕ್ಕೆ ಒಳಗಾದ ದಂಪತಿ, ಗೃಹಪ್ರವೇಶ ಆಹ್ವಾನ ಪತ್ರ ನೀಡುವ ನೆಪದಲ್ಲಿ ಬಂದ ಅಪರಿಚಿತರಿಬ್ಬರು ಚಿನ್ನದ ವ್ಯಾಪಾರಿ ಬಾಬುರಾವ್ ರನ್ನ ನಿಮ್ಮ ಪುತ್ರ ಹರೀಶ್ ಎಲ್ಲಿ ಎಂದು ಕೇಳಿದ್ದಾರೆ. ಇದಕ್ಕೆ ಬಾಬುರಾವ್​,  ಹರೀಶ್ ಮನೇಲಿ ಇಲ್ಲ ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: ಡಿ.ಕೆ.ಶಿ ಮಂತ್ರಿ ಆಗಿರುವುದು ಕರ್ನಾಟಕಕ್ಕೋ ಅಥವಾ ತಮಿಳುನಾಡಿಗೋ?:ಹೆಚ್​ಡಿಕೆ ಕಿಡಿ

ಈ ವೇಳೆ ಕುಪಿತಗೊಂಡ ಅಪರಿಚಿತರಿಬ್ಬರು ಬಾಬುರಾವ್ ಮತ್ತು ಪತ್ನಿ ಕಮಲಬಾಯಿಗೆ ಚಾಕುವಿನಿಂದ ಇರಿದು ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ ಸ್ಥಳಕ್ಕೆ ವಿಜಯನಗರ ಠಾಣೆ ಪೋಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

Exit mobile version