Site icon PowerTV

ಶೀಲ ಶಂಕಿಸಿ ಪತಿಯಿಂದಲೇ ಪತ್ನಿ ಕೊಲೆ

ಮಂಡ್ಯ : ಶೀಲ ಶಂಕಿಸಿ ಪತ್ನಿಯನ್ನೇ ಕೊಲೆ ಮಾಡಿದ ಪತಿ ಘಟನೆ ಜಿಲ್ಲೆಯ ನಾಗಮಂಗಲದ ಟಿಬಿ ಬಡಾವಣೆಯಲ್ಲಿ ನಡೆದಿದೆ.

ಮಂಜುನಾಥ್ ಆರೋಪಿ, ಹಾಗೂ ಮಧು ಶ್ರೀ (25) ಕೊಲೆಯಾದ ಮಹಿಳೆ. ಈ ದಂಪತಿಗಳಿಗೆ ನಾಲ್ಕು ವರ್ಷದ ಗಂಡು ಮಗು ಇದ್ದು, ಒಂದೂವರೆ ವರ್ಷದಿಂದ ಟಿಬಿ ಬಡಾವಣೆಯಲ್ಲಿ ವಾಸವಾಗಿದ್ದರು. ನಿನ್ನೆ ಮಧ್ಯಾಹ್ನ ಮಂಜುನಾಥ್ ಹಾಗೂ ಮಧುಶ್ರೀ ನಡುವೆ ಜಗಳ ಶುರುವಾಗಿದ್ದು,ಕೊಲೆಯಲ್ಲಿ ಹತ್ಯೆ ಆಗಿದೆ.

ಇದನ್ನು ಓದಿ : ಎಸ್​.ಟಿ ಸೋಮಶೇಖರ್​ ಸೋಲಿಸಲು ಮೂಲ ಬಿಜೆಪಿಗರ ತಂತ್ರಗಾರಿಕೆ: ಸ್ಪೋಟಕ ಆಡಿಯೋ ಲಭ್ಯ!

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ವಾರದಲ್ಲಿ 2 ದಿನ ಮನೆಗೆ ಬರ್ತಿದ್ದ ಮಂಜುನಾಥ್. ಎಂದಿನಂತೆ ನಿನ್ನೆ ಮನೆಗೆ ಬಂದಿದ್ದ ಮಂಜುನಾಥ್ ಪತ್ನಿಯ ಬಳಿ ಜಗಳವನ್ನು ಶುರು ಮಾಡಿ ಕೊನೆಗೆ ಅವಳ ಶೀಲವನ್ನು ಶಂಕಿಸಿ ಪತ್ನಿ ಕೊಲೆಗೈದಿದ್ದಾನೆ. ಕೊಲೆ ಮಾಡಿದ ಬಳಿಕ ಮಂಜುನಾಥ್ ಸ್ಥಳದಿಂದ ಪರಾರಿ.

ಘಟನಾ ಸ್ಥಳಕ್ಕೆ ಎಸ್ಪಿ ಎನ್. ಯತೀಶ್ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು. ಶನಾಗಮಂಗಲ ಟೌನ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version