Site icon PowerTV

ಯತ್ನಾಳ್ ಗಿಳಿ ಶಾಸ್ತ್ರ ಹೇಳಲಿ : ಮಧು ಬಂಗಾರಪ್ಪ

ಶಿವಮೊಗ್ಗ : ಆರು ತಿಂಗಳಲ್ಲಿ ಕಾಂಗ್ರೆಸ್​ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದ ಬಿಜೆಪಿ ಶಾಸಕ ಯತ್ನಾಳ್​ ಅವರಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿರುಗೇಟು ಕೊಟ್ಟಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಆರು ತಿಂಗಳಲ್ಲಿ ಸರ್ಕಾರ ಬೀಳುತ್ತೆ ಎಂದು ಹೇಳುವ ಯತ್ನಾಳ್ ಬಸ್​ ನಿಲ್ದಾಣಗಳಲ್ಲಿ ಕೂತು ಗಿಳಿ ಶಾಸ್ತ್ರ ಹೇಳಲಿ ಎಂದು ಲೇವಡಿ ಮಾಡಿದ್ದಾರೆ.

ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡುವಾಗ ಅದಕ್ಕೆ ಪೂರಕವಾದ ಸಾಕ್ಷ್ಯ ನೀಡಲಿ. ಸುಮ್ಮನೆ ನಾಲಿಗೆ ಹರಿಬಿಡುವುದು ಸರಿಯಲ್ಲ. ಹಾರಿಕೆಯ ಪ್ರತಿಕ್ರಿಯೆ ನೀಡುವ ಯತ್ನಾಳ್ ಬಸ್​ ನಿಲ್ದಾಣಗಳಲ್ಲಿ ಜಾಗ ಖಾಲಿ ಇದೆ. ಅಲ್ಲಿ ಹೋಗಿ ಕುಳಿತುಕೊಂಡು ಸುಮ್ಮನೆ ಗಿಳಿ ಶಾಸ್ತ್ರ ಹೇಳುವುದೇ ಸೂಕ್ತ ಎಂದು ವಾಗ್ದಾಳಿ ನಡೆಸಿದ್ದಾರೆ.

500 ಮೀಟರ್ ಉದ್ದದ ತ್ರಿವರ್ಣ ಧ್ವಜ

77 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ಶಿವಮೊಗ್ಗದಲ್ಲಿ 500 ಮೀಟರ್ ಉದ್ದದ ತ್ರಿವರ್ಣ ಧ್ವಜ ಹಿಡಿದು ಚಿಣ್ಣರು ಸಾಗಿದರು. ಭದ್ರಾವತಿಯ ಕಾರೆಹಳ್ಳಿ ಗ್ರಾಮದ ಎನ್.ಎ.ಇ. ವಿದ್ಯಾಲಯದ ಶಾಲಾ ವಿದ್ಯಾರ್ಥಿಗಳು ಅತಿ ಉದ್ದದ ಬಾವುಟ ಪ್ರದರ್ಶನ ಮಾಡಿದರು. ಬಾರಂದೂರಿನಿಂದ ಕಾರೆಹಳ್ಳಿಯ ಶಾಲೆಯವರೆಗೆ ತ್ರಿವರ್ಣ ಧ್ವಜದ ಮೆರವಣಿಗೆ ನಡೆಸಲಾಯಿತು.

Exit mobile version