Site icon PowerTV

ಯತ್ನಾಳ್ ಶಾಸ್ತ್ರ ಹೇಳೋದು ಯಾವಾಗ ಶುರು ಮಾಡಿದ್ರು : ಕೆ.ಎನ್ ರಾಜಣ್ಣ

ಹಾಸನ : ಆರು ತಿಂಗಳ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿ ಎಂಬ ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆಗೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ತಿರುಗೇಟ ಕೊಟ್ಟಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಯತ್ನಾಳ್ ಲೋಕಸಭಾ ಸದಸ್ಯರಾಗಿದ್ರು. ವಾಜಪೇಯಿ ಅವರ ಸರ್ಕಾರದಲ್ಲಿ ರೈಲ್ವೆ ಮಂತ್ರಿಗಳಾಗಿದ್ರು. ಈಗಲೂ ಕೂಡಾ ಶಾಸಕರಾಗಿದ್ದಾರೆ. ಅವ್ರು ಶಾಸ್ತ್ರ ಹೇಳೋದನ್ನು ಯಾವಾಗ ಶುರು ಮಾಡಿದ್ರೋ ಗೊತ್ತಿಲ್ಲ ಎಂದು ಕುಟುಕಿದ್ದಾರೆ.

ಭ್ರಷ್ಟಾಚಾರದಲ್ಲಿ ಬೆಂಗಳೂರು ನಂಬರ್ ಒನ್ ಆಗಲಿದೆ ಎಂಬ ಕಾಂಗ್ರೆಸ್ ಶಾಸಕ ಬಸವರಾಜ್ ರಾಯರೆಡ್ಡಿ‌ ಹೇಳಿಕೆ ವಿಚಾರವಾಗಿ ಮಾತನಾಡಿ, ನಮ್ಮ ಪಕ್ಷದವರು ಹೇಳಿದ್ದಾರಾ? ಇವತ್ತು ಸ್ವಾತಂತ್ರ್ಯ‌ ದಿನ ಎಲ್ಲರೂ ಸಂತೋಷವಾಗಿರೋಣ. ರೆಡ್ಡಿ ಹೇಳ್ದಾ.. ರಾಜಣ್ಣ ಹೇಳ್ದಾ.. ಅಂದ್ರೆ ಹೆಂಗೆ? ಎಂದು ಗರಂ ಆಗಿದ್ದಾರೆ.

ಇದನ್ನೂ ಓದಿ : ಅರೆ ಹುಚ್ಚ ರಾಹುಲ್ ಗಾಂಧಿ ಬರಬೇಕಲ್ಲ : ಯತ್ನಾಳ್

ಅವ್ರಿಗೆ ತರಾ ಖಾಯಿಲೆ ಇರುತ್ತೆ

ಪೊಲಿಟಿಕಲ್ ಆಗಿ ಒಬ್ಬೊಬ್ಬರಿಗೆ ಒಂದೊಂದು ತರಾ ಖಾಯಿಲೆ ಇರುತ್ತೆ. ಒಬ್ಬರಿಗೆ ಹೊಟ್ಟೆ ನೋವು ಇರುತ್ತೆ, ಒಬ್ಬರಿಗೆ ಜ್ವರ ಇರುತ್ತೆ. ಹಿಂಗೆಲ್ಲಾ ಇರ್ತವೆ. ಅವರಿಗೆ ಆ ಖಾಯಿಲೆ ಇರಬಹುದು. ರಾಯರೆಡ್ಡಿ ಅವರು ಎಲ್ಲಿ ಹೇಳಿದ್ದಾರೆ ಹಾಗೆ? ನಾನು ಹಾಗೆ ಹೇಳಿಲ್ಲ ಅಂತ ಹೇಳಿದ್ದಾರೆ. ಅವರು ಹೇಳಿರಬಹುದು, ನಾನು ಪತ್ರಿಕೆಯಲ್ಲಿ ಓದಿದ್ದೇನೆ ಎಂದು ಹೇಳಿದ್ದಾರೆ.

Exit mobile version