Site icon PowerTV

ನನ್ನ ಟಾರ್ಗೆಟ್ ಮಾಡಿ CM ಆಗೋಕೆ ಆಗಲ್ಲ : ಡಿಕೆಶಿಗೆ ಸಿ.ಟಿ ರವಿ ಟಾಂಗ್

ಚಿಕ್ಕಮಗಳೂರು : ನಾನು ಸೋತಿರುವ ಸಾಮಾನ್ಯ ಕಾರ್ಯಕರ್ತ, ನನ್ನ ಟಾರ್ಗೆಟ್ ಮಾಡಿ ಸಿಎಂ ಆಗೋಕ್ಕೆ ಆಗಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಅವರಿಗೆ ಮಾಜಿ ಸಚಿವ ಸಿ.ಟಿ. ರವಿ ಟಾಂಗ್ ಕೊಟ್ಟರು.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನೀವು ಸಿಎಂ ಆಗೋಕೆ ಬೇರೆಯವರನ್ನು ಟಾರ್ಗೆಟ್ ಮಾಡ್ಬೇಕು. ನನ್ನ ಏಕೆ ಟಾರ್ಗೆಟ್ ಮಾಡ್ತೀರಾ? ಎನ್ನುವ ಮೂಲಕ ಸಿ.ಟಿ ರವಿಗೆ ಟ್ರೀಟ್ಮೆಂಟ್ ಅಗತ್ಯವಿದೆ ಎಂದಿದ್ದ ಡಿಕೆಶಿಗೆ ಟಕ್ಕರ್ ಕೊಟ್ಟರು.

ನಾನು ಸಂಘದ ಸ್ವಯಂ ಸೇವಕ, ಅವ್ರು ಕೊತ್ವಾಲ್ ರಾಮಚಂದ್ರನ ಶಿಷ್ಯ. ಅವರು ಎಲ್ಲರಿಗೂ ಟ್ರೀಟ್ಮೆಂಟ್ ಕೊಡ್ತಾರೆ. ಅವರ ಕೊತ್ವಾಲ್ ಮಾದರಿ ಟ್ರೀಟ್ಮೆಂಟ್ ಅಂತ ನನಗೆ ಭಯ. ಅದಕ್ಕಾಗಿ ರಕ್ಷಣೆಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡ್ತೀನಿ ಎಂದು ಕುಟುಕಿದರು.

ಇದನ್ನೂ ಓದಿ : ಸಿ.ಟಿ ರವಿಗೂ ಟ್ರೀಟ್ಮೆಂಟ್ ಬೇಕಿದೆ : ಡಿ.ಕೆ ಶಿವಕುಮಾರ್

ಅವ್ರು ದೇಶದ ಶ್ರೀಮಂತ ಶಾಸಕ

ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಅವ್ರು ದೇಶದ ಶ್ರೀಮಂತ ಶಾಸಕ. ಅವರ ಬಳಿ ಬೆಂಗಳೂರು ಅಭಿವೃದ್ಧಿ, ಉಸ್ತುವಾರಿ, ನೀರಾವರಿ ಎಲ್ಲಾ ಇದೆ. ನಾನು ಸೋತಿದ್ದೀನಿ, ಅವರು ಗೆದ್ದಿದ್ದಾರೆ. ಅಧಿಕಾರ ಮದ ನಿರ್ಮಾಣ ಮಾಡುತ್ತೆ. ಬಹುಶಃ, ಅಧಿಕಾರದ ಅಹಃ ಭಾವದಲ್ಲಿ ಎಲ್ಲರಿಗೂ ಟ್ರೀಟ್ಮೆಂಟ್ ಕೊಡುವ ಹುಮ್ಮಸ್ಸು ಬಂದಿರಬಹುದು. ಆ ಹುಮ್ಮಸ್ಸಿನಿಂದಲೇ ನನಗೂ ಟ್ರೀಟ್ಮೆಂಟ್ ಬಗ್ಗೆ ಮಾತನಾಡ್ತಿದ್ದಾರೆ ಎಂದು ಛೇಡಿಸಿದರು.

Exit mobile version