Site icon PowerTV

ಉಗ್ರ ಶಾರಿಕ್​ಗಿಂತ ಸಿ.ಟಿ. ರವಿ ಒಂದು ಕೈ ಮೇಲು : ಸಚಿನ್ ಮಿಗಾ

ಬೆಂಗಳೂರು : ಕುಕ್ಕರ್ ಬಾಂಬ್ ಸ್ಫೋಟ ಉಗ್ರ ಶಾರಿಕ್​ಗಿಂತ ಮಾಜಿ ಸಚಿವ ಸಿ.ಟಿ. ರವಿ ಒಂದು ಕೈ ಮೇಲು ಎಂದು ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ಹೇಳಿದ್ದಾರೆ.

ಸಿ.ಟಿ ರವಿ ಆರೋಪಗಳಿಗೆ ತಿರುಗೇಟು ನೀಡುವ ಭರದಲ್ಲಿ, ರಾಜಕಾರಣದಲ್ಲಿ ಮಾಸ್ಟರ್ ಮೈಂಡ್ ಉಗ್ರ ಇದ್ದರೆ ಅದು ಸಿ.ಟಿ. ರವಿ ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ರಾಜಕೀಯದಲ್ಲಿ ಸಿ.ಟಿ. ರವಿ ಹಲವರನ್ನು ಬಲಿ ಕೊಟ್ಟಿದ್ದಾರೆ. ಘೋರಿ, ದರ್ಗಾಗಳನ್ನು ಸಂಚಿನಲ್ಲಿ ಧ್ವಂಸ ಮಾಡಿಸಿದ್ದರೆ ಅದು ಸಿ.ಟಿ. ರವಿ. ಮಹೇಂದ್ರ ಕುಮಾರ್ ಬಳಸಿಕೊಂಡು ದರ್ಗಾ, ದೇಗುಲ ದ್ವಂಸ ಮಾಡಿದ್ದರು ಎಂದು ಕುಟುಕಿದ್ದಾರೆ.

ಗಡಿಪಾರು ಮಾಡಬೇಕು

ಸಿ.ಟಿ. ರವಿ ಪದೇ ಪದೆ ತಮ್ಮ ನಾಲಿಗೆ ಹರಿಬಿಡುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯರನ್ನು ಸಿದ್ರಾಮುಲ್ಲಾ ಖಾನ್ ಎಂದು ಹೇಳಿದ್ದರು. ಈಗ ಡಿಸಿಎಂ ಡಿ.ಕೆ ಶಿವಕುಮಾರ್ ಹೆಸರಿಗೆ ಕೊತ್ವಾಲ್ ಹೆಸರನ್ನು ಸೇರಿಸಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದ ಜನ ಸಿ.ಟಿ. ರವಿರನ್ನು ಮನೆಗೆ ಕಳುಹಿಸಿದ್ದಾರೆ. ಉಗ್ರ ಸಿ.ಟಿ. ರವಿಯನ್ನು ಗಡಿಪಾರು ಮಾಡಬೇಕು ಅಂತ ಒತ್ತಾಯ ಮಾಡುತ್ತೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.

Exit mobile version