Site icon PowerTV

ಉಪೇಂದ್ರ ಬುದ್ದಿವಂತ ಅಲ್ಲ.. ಈಡಿಯಟ್ : ಎನ್. ಮಹೇಶ್

ಚಾಮರಾಜನಗರ : ನಟ ಉಪೇಂದ್ರ ಆಕ್ಷೇಪಾರ್ಹ ಪದ ಬಳಕೆ ವಿಚಾರ ಕುರಿತು ಮಾಜಿ ಸಚಿವ ಎನ್‌. ಮಹೇಶ್ ಆಕ್ರೋಶ ಹೊರಹಾಕಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಉಪೇಂದ್ರ ಈಡಿಯಟ್ ಅನಿಸುತ್ತದೆ. ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕು ಅಂತ ಗೊತ್ತಿರಬೇಕು ಎಂದು ಕಿಡಿಕಾರಿದ್ದಾರೆ.

ಉಪೇಂದ್ರ ಅವರನ್ನು ಬುದ್ದಿವಂತ ಅನ್ಕೊಂಡಿದ್ದೆ, ಆದರೆ, ಈಗ ತಿಳಿಯಿತು ಆತ ಬುದ್ದಿ ಇಲ್ಲದ ಮನುಷ್ಯ ಅಂತ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳಿದ್ರೆ ಆಗಲ್ಲ, ತಪ್ಪಿಗೆ ಶಿಕ್ಷೆ ಆಗಲೇಬೇಕು. ನ್ಯಾಯಾಲಯದ ಮುಂದೆ ನಿಲ್ಲುವುದು ನಟನೆ ಮಾಡಿದಷ್ಟು ಸುಲಭವಲ್ಲ. ಜಾತಿ ನಿಂದನೆ ಮಾಡಿರುವುದರಿಂದ ಶಿಕ್ಷೆ ಆಗಲೇಬೇಕು ಎಂದು ಮಾಜಿ ಸಚಿವ ಎನ್. ಮಹೇಶ್ ವಾಗ್ದಾಳಿ ನಡೆಸಿದ್ದಾರೆ.

ಹೈಕೋರ್ಟ್​ ಆದೇಶ(FIRಗೆ ತಡೆ)ದ ಬಳಿಕ ನಟ ಉಪೇಂದ್ರ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಈ ಪೋಸ್ಟ್​ ವೈರಲ್​ ಆಗಿದೆ. ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

Exit mobile version