Site icon PowerTV

ವಾಲ್ಮೀಕಿ ಮಠದಲ್ಲಿ ಕಾರು ಚಾಲಕನ ಅಸಭ್ಯ ವರ್ತನೆ

ದಾವಣಗೆರೆ : ವಾಲ್ಮೀಕಿ ಮಠದಲ್ಲಿ ಮಹಿಳೆಯರೊಂದಿಗೆ ಅಸಭ್ಯ ವರ್ತನೆಯಿಂದ ನಡೆದುಕೊಂಡ ಕಾರು ಚಾಲಕ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಮಠದಲ್ಲಿ ನಡೆದಿದೆ.

ರಾಜನಹಳ್ಳಿ ವಾಲ್ಮೀಕಿ ಮಠದ ಸ್ವಾಮೀಜಿ ಅವರ ಕಾರು ಚಾಲಕನೊಬ್ಬ ಮಠಕ್ಕೆ ಬರುತ್ತಿದ್ದ ಮಹಿಳೆಯರ ಬಳಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಹಿನ್ನೆಲೆ ಭಕ್ತರು ಆಕ್ರೋಶಗೊಂಡಿದ್ದು, ಚಾಲಕನಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಇದನ್ನು ಓದಿ : ಸ್ವಾತಂತ್ರ್ಯ ದಿನಾಚರಣೆ; ಬೆಂಗಳೂರಿನ ಮಾಣಿಕ್ಯ ಷಾ ಮೈದಾನದಲ್ಲಿ ಭರ್ಜರಿ ಸಿದ್ಧತೆ

ಚಾಲಕನ ವರ್ತನೆ ಬಗ್ಗೆ ಆಚೆ ಹೇಳಿದರೆ, ಸಮಾಜದ ಮರ್ಯಾದೆ ಹಾಗೂ ಮಠದ ಮರ್ಯಾದೆ ಕೂಡ ಹಾಳಗುತ್ತದೆ ಎಂದು ಇಷ್ಟು ದಿನ ಸುಮ್ಮನೆ ಇದ್ದೇವು. ಮಠದಲ್ಲಿ ಇಂತಹ ದೌರ್ಜನ್ಯಗಳು ನಡೆಯಬಾರದು. ಅದರಿಂದ ಇಬ್ಬರು ಚಾಲಕರನ್ನು ಮಠದಿಂದ ಹೊರಗೆ ಕಳುಹಿಸಿ ಎಂದು ವಾಲ್ಮೀಕಿ ಮಠದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಭಕ್ತರು.

ಭಕ್ತರು ತರಾಟೆ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ.

Exit mobile version