Site icon PowerTV

ಸ್ವಾತಂತ್ರ್ಯ ದಿನ.. ನಾಳೆ 2.70 ಲಕ್ಷ ಲಡ್ಡು ವಿತರಣೆ

ರಾಮನಗರ : 77ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ಭಾಗವಾಗಿ ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ ಅವರು 2.70 ಲಕ್ಷ ಲಡ್ಡು ವಿತರಣೆ ಮಾಡಲಿದ್ದಾರೆ.

ಆಗಸ್ಟ್​ 15 (ನಾಳೆ) ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ದೇಶ ಸಜ್ಜಾಗಿದೆ. ಸ್ವಾತಂತ್ರ ದಿನಾಚರಣೆಯನ್ನು ಸಂಭ್ರಮಿಸುವ ಉದ್ದೇಶದಿಂದ ಲಾಡು ವಿತರಣೆಗೆ ಶಾಸಕ ಇಕ್ಬಾಲ್‌ ಹುಸೇನ್‌ ಅವರು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ 5 ತಾಲ್ಲೂಕಿನ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ಲಡ್ಡು ಹಂಚಿಕೆ ಮಾಡಲಿದ್ದಾರೆ.

ರಾಮನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬರೋಬ್ಬರಿ 2,70,000 ಲಡ್ಡು ತಯಾರಿ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಲಾಡು ಹಂಚಿಕೆ ಮಾಡಲಾಗುವುದು.

100 ಮಂದಿ ನುರಿತ ಬಾಣಸಿಗರು ಲಡ್ಡು ತಯಾರಿಸಿದ್ದಾರೆ. ಸ್ವತಂತ್ರ ದಿನದಂದು ಹಂಚಲು ಇಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಎಲ್ಲಾ ಶಾಲೆಗಳಿಗೂ ಲಡ್ಡು ನೀಡಲಾಗುವುದು. ಶಾಸಕ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ಲಡ್ಡು ಹಂಚಿಕೆ ಕಾರ್ಯ ನಡೆಯಲಿದೆ.

Exit mobile version