Site icon PowerTV

ಡಿಕೆ ಸಾಹೆಬ್ರೇ.. ನವರಂಗಿ ನೀವಾ? ನಾವಾ? : ಅಶ್ವತ್ಥನಾರಾಯಣ

ಬೆಂಗಳೂರು : ನವರಂಗಿ ನಾರಾಯಣ ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಮಾತಿಗೆ ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿರುಗೇಟು ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಡಿ.ಕೆ ಶಿವಕುಮಾರ್ ಅವ್ರೇ ನವರಂಗಿ ನೀವಾ..? ನಾವಾ..? ಎಂದು ಕುಟುಕಿದ್ದಾರೆ.

ನಿಮ್ಮ ಕಾಂಗ್ರೆಸ್​ ಪಕ್ಷ ಭ್ರಷ್ಟಾಚಾರವನ್ನು ಹುಟ್ಟುಹಾಕಿದೆ. ಅದನ್ನು ಪಾಲಿಸಿ, ಪೋಷಿಸಿ ಹೆಮ್ಮರವಾಗಿ ಬೆಳೆಸಿದೆ. ಭ್ರಷ್ಟಾಚಾರದ ಬದುಕಿನಲ್ಲಿರುವ ಪಕ್ಷದಲ್ಲಿ ಅಂಗಲಾಚಿ.. ಅಂಗಲಾಚಿ.. ಬೇಡಿ.. ಬೇಡಿ.. ಅಧಿಕಾರಕ್ಕೆ ಬಂದವರು ನೀವು. ನವರಂಗಿಗಳು ನೀವಾ? ನಾವಾ? ಎಂದು ಛೇಡಿಸಿದ್ದಾರೆ.

ಮಾತು ಬರುತ್ತೆ ಅಂತ ಮಾತಾಡಿ ಭಂಡತನ ತೋರಿಸಿದ್ದೀರಿ. ಇಂಥ ಭಂಡರು ಏನು ಬೇಕಾದರೂ ಸಮರ್ಥನೆ ಮಾಡಿಕೊಳ್ಳುತ್ತಾರೆ. ಅವರ ಪಕ್ಷದ ಇಕ್ಬಾಲ್ ಹುಸೇನ್ ಅವರೇ ಹೇಳಿದ್ರು. ನಮ್ಮ ರಾಮನಗರ ಜನಕ್ಕೆ ಮೋರಿ‌ ನೀರು ಕುಡಿಸಿದ್ದಾರೆ ಅಂತ. ಇವತ್ತು ನಾವು ಬಂದು ಅಲ್ಲಿ ಕಾವೇರಿ ನೀರು ಕೊಡ್ತಿದ್ದೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.

Exit mobile version