Site icon PowerTV

ಸಿ.ಟಿ ರವಿಗೂ ಟ್ರೀಟ್ಮೆಂಟ್ ಬೇಕಿದೆ : ಡಿ.ಕೆ ಶಿವಕುಮಾರ್

ಬೆಂಗಳೂರು : ಕಮಿಷನ್ ಪಡೆದಿಲ್ಲ ಅನ್ನೋದಾದ್ರೆ ಅಜ್ಜಯ್ಯನ ಮೇಲೆ ಆಣೆ ಮಾಡುವಂತೆ ಹೇಳಿದ್ದ ಬಿಜೆಪಿ ಮಾಜಿ ಸವಿವ ಸಿ.ಟಿ. ರವಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು. ಸಿ.ಟಿ. ರವಿ ಅವರಿಗೂ ಟ್ರೀಟ್ಮೆಂಟ್ ಬೇಕಿದೆ, ಕೊಡೋಣ ಎಂದು ಕುಟುಕಿದ್ದಾರೆ.

ಎರಡು ದಿನ ಕಳಿಯಲಿ. ಕಂಟ್ರಾಕ್ಟ್ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇನೆ. ಗುತ್ತಿಗೆದಾರರರಿಗೆ ಆಗಿರುವ ಸಮಸ್ಯೆಗಳ ಬಗ್ಗೆ ಬೇಸರ ಇದೆ. ಆದರೆ, ಹೇಗೆ ಗುತ್ತಿಗೆದಾರರ ಹೆಸರಲ್ಲಿ ದುರುಪಯೋಗ ಪಡಿಸಿಕೊಂಡಿದ್ದಾರೆ ಅನ್ನೋ ವಿಚಾರ ಗೊತ್ತಾಗಿದೆ. ಎಲ್ಲದಕ್ಕೂ ದಾಖಲೆ ಇಟ್ಟು ಮಾತನಾಡ್ತೀನಿ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಕಾರ್ಯಕರ್ತರ ನೇಮಕ ಮಾಡ್ತೇವೆ

ನಮ್ಮ ಹೋರಾಟ ಮುಂದುವರೆಯಬೇಕು. ಕಾಂಗ್ರೆಸ್​ ಸರ್ಕಾರ ಬರುವಾಗ ಹೇಗೆ ಹೋರಾಟ ಇತ್ತೋ, ಅದಕ್ಕಿಂತ ಹೆಚ್ಚು ಹೋರಾಟ ಮಾಡಬೇಕು. ಕಳೆದ ಚುನಾವಣೆಗಿಂತ ಹೆಚ್ಚು ಶೇಕಡಾವಾರು ಮತ ನಮಗೆ ಬರಬೇಕು. ಸಾಮಾಜಿಕ ನ್ಯಾಯ ಗಮನದಲ್ಲಿಟ್ಟುಕೊಂಡು ವಿವಿಧ ಸಮಿತಿಗಳಲ್ಲಿ ಕಾರ್ಯಕರ್ತರ ನೇಮಕ ಮಾಡ್ತೇವೆ. ರಾಜ್ಯ ಮಟ್ಟದ ಪದಾಧಿಕಾರಿಗಳಿಗೂ ಸಮಿತಿಗೆ ಹೆಸರು ಶಿಫಾರಸು ಮಾಡಲು ಅವಕಾಶ ಇದೆ ಎಂದು ಹೇಳಿದ್ದಾರೆ.

Exit mobile version