Site icon PowerTV

ಹೆಚ್ಚುವರಿ ಬಸ್​ ಸೇವೆ  ಕಲ್ಪಿಸುವಂತೆ ಒತ್ತಾಯಿಸಿ ಬಸ್ ತಡೆದು ಪ್ರತಿಭಟನೆ!

ದೊಡ್ಡಬಳ್ಳಾಪುರ : ಹೆಚ್ಚುವರಿ ಬಸ್ ಸೇವೆ ಒದಗಿಸುವಂತೆ ಆಗ್ರಹಿಸಿ ಎಬಿವಿಪಿ ಸಂಘಟನೆ ಮತ್ತು ವಿದ್ಯಾರ್ಥಿಗಳಿಂದ ಇಂದು ತಾಲ್ಲೂಕಿನ ಪಾಲ್​ಪಾಲ್​ದಿನ್ನೆ ಯಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಲಾಯಿತು.

ಇದನ್ನೂ ಓದಿ: ಪ್ರೇಮಿ ಜೊತೆ ಸೇರಲು ಪತಿಯನ್ನೇ ಕೊಂದ ಪಾಪಿ ಪತ್ನಿ

ದೊಡ್ಡಬಳ್ಳಾಪುರದ ಘಾಟಿ ಸುಬ್ರಮಣ್ಯ ಮಾರ್ಗದಲ್ಲಿ 200 ರಿಂದ ಮುನ್ನೂರು ವಿದ್ಯಾರ್ಥಿಗಳು ಸಂಚರಿಸುವ ಮಾರ್ಗಕ್ಕೆ ಕೇವಲ ಒಂದು ಬಸ್ ವ್ಯವಸ್ಥೆ ಮಾತ್ರ ಇದೆ.  ಶಾಲಾ ಕಾಲೇಜುಗಳಿಗೆ ತೆರಳಲು ಬಸ್​ ಸೌಲಭ್ಯವೇ ಆಧಾರವಾಗಿದ್ದು  ಸಮಯಕ್ಕೆ ಸರಿಯಾಗಿ ಬಸ್​ ಸಿಗದೇ ಹೈರಾಣಾದ ವಿದ್ಯಾರ್ಥಿಗಳು ಹೆಚ್ಚುವರಿ ಬಸ್ ಕಲ್ಪಿಸುವಂತೆ ಆಗ್ರಹಿಸಿ ಇಂದು ಬಸ್​ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಈ ಹಿಂದೆಯು ಹೆಚ್ಚುವರಿ ಬಸ್​ ಸೇವೆ ನೀಡುವಂತೆ ಒತ್ತಾಯಿಸಿ ಹಲವು ಬಾರಿ ಮನವಿ ಮಾಡಿದರು ಕ್ರಮ ಕೈಗೊಳ್ಳದ ಡಿಪೋ ಮ್ಯಾನೇಜರ್ ವಿರುದ್ಧ ವಿದ್ಯಾರ್ಥಿಗಳು ಮತ್ತು ಎಬಿವಿಪಿ ಸಂಘಟನೆ ಘೋಷಣೆ ಕೂಗಿದರು. ಪ್ರತಿಭಟನಾ ಸ್ಥಳಕ್ಕೆ ಕೆಎಸ್ ಆರ್ ಟಿಸಿ ಅಧಿಕಾರಿಗಳು ಬರುವಂತೆ ಒತ್ತಾಯಿಸಿದರು ಅಧಿಕಾರಿಗಳು  ಬರುವವರೆಗೂ ಬಸ್ ಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ.

Exit mobile version