Site icon PowerTV

ಬಂಧನದ ಭೀತಿಯಲ್ಲಿ ನಾಪತ್ತೆಯಾದ ನಟ ಉಪೇಂದ್ರ!

ಬೆಂಗಳೂರು: ಪರಿಶಿಷ್ಟರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ​ ನಟ, ನಿರ್ದೇಶಕ ಉಪೇಂದ್ರಗೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಬಂಧನ ಭೀತಿಯಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಭಾನುವಾರ ಪ್ರಜಾಕೀಯ ದಿನ ಅಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಲೈವ್​ನಲ್ಲಿ ಮಾತನಾಡುವಾಗ ಉಪೇಂದ್ರ ಅವರು ಆಕ್ಷೇಪಾರ್ಹ ಪದ ಬಳಸಿದ್ದರು. ಈ ಹಿನ್ನೆಲೆ ರಾಜ್ಯದ ಹಲವು ಪೊಲೀಸ್​ ಠಾಣೆಗಳಲ್ಲಿ ನಟ ಉಪೇಂದ್ರ ವಿರುದ್ದ ಎಫ್ಐಆರ್ ದಾಖಲಾಗಿತ್ತು, ನಿನ್ನೆ ಉಪೇಂದ್ರ ಗೆ ನಗರದ ಸಿ.ಕೆ ಅಚ್ಚುಕಟ್ಟು ಠಾಣೆಯ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್​ ನೀಡಿದ್ದರು.

ಇದನ್ನೂ ಓದಿ: ನಟ ಉಪೇಂದ್ರ ವಿರುದ್ಧ ಎಫ್ಐಆರ್ ದಾಖಲು

ಉಪೇಂದ್ರ ಒಡೆತನದ ಕತ್ರಿಗುಪ್ಪೆ ಮನೆಯಲ್ಲಿ ಮಹಜರು ಪ್ರಕ್ರಿಯೆ ಮುಗಿಸಿರುವ ಪೊಲೀಸರು ಬಳಿಕ ಇಂದು 10.30 ಕ್ಕೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರಿಂದ ನೋಟೀಸ್ ನೀಡಲಾಗಿತ್ತು. ಆದರೇ ಅವರ ಫೋನ್​ ಸ್ವಿಚ್​ ಆಫ್​ ಆಗಿದೆ,  ಆದ್ದರಿಂದ ಅವರ ವಾಟ್ಸಪ್ ಸಂಖ್ಯೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಸಂದೇಶ ಕಳಿಸಲಾಗಿದೆ.

ಹಲಸೂರು ಗೇಟ್ ಠಾಣೆಯಲ್ಲಿ ದಾಖಲಾದ ಪ್ರಕರಣವು ಇಂದು ಸಿ ಕೆ ಅಚ್ಚುಕಟ್ಟು ಠಾಣೆಗೆ ವರ್ಗಾವಣೆ ಯಾಗುತ್ತಿದ್ದು ವಿ.ವಿ ಪುರಂ ಉಪ ವಿಭಾಗ ಎಸಿಪಿಯಿಂದ ವತಿಯಿಂದ ತನಿಖೆ ನಡೆಯಲಿದೆ.

Exit mobile version