Site icon PowerTV

WI vs IND : ವಿಂಡೀಸ್​ಗೆ 166 ಟಾರ್ಗೆಟ್ ಕೊಟ್ಟ ಇಂಡಿಯಾ

ಬೆಂಗಳೂರು : ವೆಸ್ಟ್​ ಇಂಡೀಸ್ ವಿರುದ್ಧದ 5ನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ವಿಂಡೀಸ್​ಗೆ 166 ರನ್​ಗಳ ಸವಾಲಿನ ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್​ ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್​ ಕಲೆಹಾಕಿತು.

ನಾಲ್ಕನೇ ಟಿ-20 ಪಂದ್ಯದಲ್ಲಿ ಬೊಂಬಾಟ್ ಜೊತೆಯಾಟದ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದ ಶುಭಮನ್ ಗಿಲ್(9) ಹಾಗೂ ಯಶಸ್ವಿ ಜೈಸ್ವಾಲ್(5) ಬ್ಯಾಟ್ ಇಂದು ಘರ್ಜಿಸಲಿಲ್ಲ. ಇಬ್ಬರೂ ಒಂದಂಕಿಗೆ ಪೆವಿಲಿಯನತ್ತ ಹೆಜ್ಜೆ ಹಾಕಿದರು. ಬಳಿಕ, ಜೊತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾದರು.

ಘರ್ಜಿಸದ ಸಂಜು-ಪಾಂಡ್ಯ ಬ್ಯಾಟ್

45 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ ಯಾದವ್ 3 ಸಿಕ್ಸರ್ ಹಾಗೂ 4 ಬೌಂಡರಿ ನೆರವಿನಿಂದ ಅರ್ಧಶತಕ(61) ಸಿಡಿಸಿದರು. ತಿಲಕ್ ವರ್ಮಾ 27 ರನ್​ಗಳಿಸಲಷ್ಟೇ ಶಕ್ತರಾದರು. ಬಳಿಕ ಬಂದ ಸಂಜು ಸ್ಯಾಮ್ಸನ್ 13 ಹಾಗೂ ನಾಯಕ ಹಾರ್ದಿಕ್ ಪಾಂಡ್ಯ 14 ರನ್ ಗಳಿಸಿ ಮತ್ತೆ ವಿಫಲರಾದರು.

ಇದನ್ನೂ ಓದಿ : 1,159 ಕೋಟಿ ಆದಾಯ ತೆರಿಗೆ ಪಾವತಿಸಿದ BCCI

4 ವಿಕೆಟ್ ಪಡೆದು ಮಿಂಚಿದ ಶೆಫರ್ಡ್

ಉಳಿದಂತೆ, ಟೀಂ ಇಂಡಿಯಾ ಬಾಲಂಗೋಚಿಗಳು ವಿಂಡೀಸ್ ಬೌಲರ್​ಗಳ ದಾಳಿಗೆ ನಲುಗಿದರು. ಆಲ್​ರೌಂಡರ್ ಅಕ್ಷರ್ ಪಟೇಲ್ ಸಹ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಹೀಗಾಗಿ, ನಿಗದಿತ 20 ಓವರ್​ಗಳಲ್ಲಿ ಭಾರತ್ 9 ವಿಕೆಟ್ ಕಳೆದುಕೊಂಡು 165 ರನ್​ ಗಳಿಸಿತು. ಇನ್ನೂ ವಿಂಡೀಸ್ ಪರ ರೊಮಾರಿಯೋ ಶೆಫರ್ಡ್ 4 ವಿಕೆಟ್ ಪಡೆದರು ಮಿಂಚಿದರು. ಇವರಿಗೆ ಸಾಥ್ ನೀಡಿದ ಹೊಸೈನ್ 2, ಜೋಸನ್ ಹೋಲ್ಡರ್ 2, ರಸ್ತೋನ್ 1 ವಿಕೆಟ್ ಪಡೆದರು.

ಸತತ 11 ದ್ವಿಪಕ್ಷೀಯ ಟಿ-20 ಸರಣೆ ಗೆದ್ದು ದಾಖಲೆ ನಿರ್ಮಿಸಿರುವ ಭಾರತಕ್ಕೆ ಇಂದಿನ ಪಂದ್ಯ ನಿರ್ಣಾಯಕವಾಗಿದೆ. ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳುತ್ತಾ ಎಂದು ಕಾದುನೋಡಬೇಕಿದೆ.

Exit mobile version