Site icon PowerTV

ಸಾಫ್ಟ್​ವೇರ್ ಎಂಜಿನಿಯರ್ ಆತ್ಮಹತ್ಯೆ

ಕಾರವಾರ : ಬೆಂಗಳೂರು ಮೂಲದ ಸಾಪ್ಟ್​ವೇರ್ ಎಂಜಿನಿಯರ್ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋಕರ್ಣದ ಓಂ ಬೀಚ್ ರೆಸಾರ್ಟ್​ನಲ್ಲಿ ನಡೆದಿದೆ.

ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಸಾಪ್ಟ್​ವೇರ್ ಎಂಜಿನಿಯರ್ ರಿಷಿಕೇಶ ರೆಡ್ಡಿ (35) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದಿದ್ದು, ಓಂ ಬೀಚ್ ರೆಸಾರ್ಟ್‌ನಲ್ಲಿ 3 ದಿನ ರೂಂ ಬಾಡಿಗೆ ತೆಗೆದುಕೊಂಡು ನೆಲೆಸಿದ್ದನು. ಆದರೆ ಶುಕ್ರವಾರ ಸಂಜೆ ರೆಸಾರ್ಟ್​ನಲ್ಲಿ ರಿಷಿಕೇಶ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನು ಓದಿ : ಮಹಜರು ವೇಳೆ ಪೋಲಿಸರ ಮೇಲೆ ಹಲ್ಲೆ; ರೌಡಿಶೀಟರ್ ​ಗೆ ಗುಂಡೇಟು

ಘಟನಾ ಸ್ಥಳಕ್ಕೆ ಗೋಕರ್ಣ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದ್ದು, ಗೋಕರ್ಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version