Site icon PowerTV

ಭರ್ಜರಿ ಬೇಟೆ : ಶಿವಮೊಗ್ಗದಲ್ಲಿ ನಾಲ್ವರು ರೌಡಿಶೀಟರ್​ಗಳ ಬಂಧನ

ಶಿವಮೊಗ್ಗ : ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ರೌಡಿಶೀಟರ್​ಗಳನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.

ಎಂಆರ್​ಎಸ್​(MRS)ನಿಂದ ವಡ್ಡಿನಕೊಪ್ಪ ಗ್ರಾಮದ ಕಡೆಗೆ ಹೋಗುವ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಸಿಇಎನ್​(CEN) ಠಾಣೆಯ ಪಿಐ ದೀಪಕ್ ಎಂ.ಎಸ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

ಶಿವಮೊಗ್ಗದ ರೌಡಿಗಳಾದ ಪ್ರವೀಣ್(ಮೋಟು ಬಿನ್ ಮೂರ್ತಿ), ವಿಶಾಲ್ ವಿ (ಪಾಲು ಬಿನ್ ವಿಶ್ವನಾಥ ಎಸ್), ಪ್ರೀತಂ (ಡಿಟೋ ಬನ್ ಕೃಷ್ಣ), ತಿಪಟೂರಿನ ನಿತೇಶ್ ಎಸ್.ವೈ, ಬಿನ್ ಎಸ್.ಎ ಯೋಗೇಶ್ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ 1.10 ಲಕ್ಷ ರೂಪಾಯಿ ಮೌಲ್ಯದ 2 ಕೆಜಿ ಒಣ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ ಕೆಟಿಎಂ(KTM) ಡ್ಯೂಕ್ ಬೈಕ​​ನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಸಿಇಎನ್​(CEN) ಕ್ರೈಂ ಪೊಲೀಸ್ ಠಾಣೆಯಲ್ಲಿ ಎನ್​ಡಿಪಿಎಸ್​(NDPS) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Exit mobile version