Site icon PowerTV

ನಿಮಗೆ ಎಷ್ಟು ಧೈರ್ಯ? 2 ನಿಮಿಷ ಮಾತನಾಡಿದ್ದೀರಿ : ರಾಹುಲ್ ಗಾಂಧಿ

ಬೆಂಗಳೂರು : ಲೋಕಸಭೆ ಸದಸ್ಯತ್ವ ಮರುಸ್ಥಾಪಿಸಿದ ನಂತರ ಕೇರಳದ ವಯನಾಡಿನಲ್ಲಿ ನಡೆದ ಮೊದಲ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್​​ ನಾಯಕ ರಾಹುಲ್ ಗಾಂಧಿ, ಮೋದಿ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ. 

ಬಿಜೆಪಿ ಮಣಿಪುರವನ್ನು ಕೊಂದಿತು, ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಅವಕಾಶ ಮಾಡಿಕೊಟ್ಟಿತು. ದೇಶದ ಪ್ರಧಾನಿಯಾಗಿ ನೀವು ನಗುತ್ತಿದ್ದೀರಿ, ಭಾರತ ಮಾತೆಯ ಹತ್ಯೆಯ ಬಗ್ಗೆ ಎರಡು ನಿಮಿಷ ಮಾತನಾಡಿದ್ದೀರಿ, ನಿಮಗೆ ಎಷ್ಟು ಧೈರ್ಯ? ಎಂದು ಪ್ರಶ್ನಿಸಿದ್ದಾರೆ.

ಭಾರತದ ಕಲ್ಪನೆಯನ್ನು ಹೇಗೆ ಅಗೌರವಗೊಳಿಸುತ್ತೀರಿ? ಕಳೆದ ನಾಲ್ಕು ತಿಂಗಳಿನಿಂದ ನೀವು ಏನು ಮಾಡುತ್ತಿದ್ದೀರಿ? ನೀವು ಯಾಕೆ ಅಲ್ಲಿಗೆ ಹೋಗಿಲ್ಲ? ಹಿಂಸಾಚಾರವನ್ನು ತಡೆಯಲು ನೀವು ಏಕೆ ಪ್ರಯತ್ನಿಸಲಿಲ್ಲ? ಎಂದು ಛೇಡಿಸಿದ್ದಾರೆ.

ಭಾರತವನ್ನು ಪ್ರೀತಿಸಲು ಸಾಧ್ಯವಿಲ್ಲ

ನೀವು ರಾಷ್ಟ್ರೀಯವಾದಿ ಅಲ್ಲ, ಭಾರತದ ಕಲ್ಪನೆಯನ್ನು ಕೊಲೆ ಮಾಡುವ ಯಾರೇ ಆದರೂ ರಾಷ್ಟ್ರೀಯವಾದಿಯಾಗಲು ಸಾಧ್ಯವಿಲ್ಲ. ಭಾರತವನ್ನು ಪ್ರೀತಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ ನಡೆಸಿದ್ದಾರೆ.

Exit mobile version