Site icon PowerTV

ಮಗುವಿನ ಜೊತೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಆನೇಕಲ್ : ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಒರ್ವ ಮಹಿಳೆ ಮಗುವಿನ ಜೊತೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಸಕಲವಾರ ಕೆರೆಯಲ್ಲಿ ನಡೆದಿದೆ.

ವಿಜಯಲಕ್ಷೀ (35), ವರ್ಷ ಹರಿಹರನ್ (7) ಮೃತರು. ಆಂಧ್ರ ಮೂಲದ ಕುಟುಂಬದವರಾಗಿದ್ದು, ಕೆಲ ವರ್ಷಗಳಿಂದ ಸಿ.ಕೆ ಪಾಳ್ಯದಲ್ಲಿ ವಾಸವಾಗಿದ್ದರು. ಮಹಿಳೆಯ ಪತಿ 2 ವರ್ಷದ ಹಿಂದೆ ಆಕ್ಸಿಡೆಂಟ್ ನಿಂದ ಸಾವನ್ನಪ್ಪಿದ್ದ ಹಿನ್ನೆಲೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆ ಇಂದು ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನು ಓದಿ : ಲಾರಿಗೆ ಡಿಕ್ಕಿ ಹೊಡೆದ ಕಾರು ; ಕುಟುಂಬದ ಐವರ ಸಾವು

ಪತಿ ತೀರಿಕೊಂಡು ಇಂದಿಗೆ ಸರಿಯಾಗಿ 2 ವರ್ಷ ಆಗಿದ್ದು, ಪತಿಯ ಸಾವಿನ ದಿನವೇ ಮಗುವಿನ ಜೊತೆಗೆ ಆತ್ಮಹತ್ಯೆಗೆ ಶರಣಾದ ತಾಯಿ.  ಸ್ಥಳಕ್ಕೆ ಬನ್ನೇರುಘಟ್ಟ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯರ ಸಹಾಯದಿಂದ ಮೃತ ದೇಹವನ್ನ ಹೊರತೆಗೆಯುವ ಕಾರ್ಯ ಮಾಡಿದ್ದಾರೆ.

Exit mobile version