Site icon PowerTV

ವಿಶ್ವ ಆನೆಗಳ ದಿನಾಚರಣೆ ; ಆನೆಬಿಡಾರದಲ್ಲಿ ಕಳೆಗಟ್ಟಿದ ಸಂಭ್ರಮ

ಶಿವಮೊಗ್ಗ : ವಿಶ್ವ ಆನೆಗಳ ದಿನಾಚರಣೆಯ ಪ್ರಯುಕ್ತ ಆನೆಗಳಿಗೆ ಪೂಜೆ ಸಲ್ಲಿಸಿದ ಅಧಿಕಾರಿಗಳು ಜಿಲ್ಲೆಯ ಗಾಜನೂರು ಸಮೀಪದ ಸಕ್ರೆಬೈಲು ಆನೆಬಿಡಾರದಲ್ಲಿ ಕಳೆಗಟ್ಟಿದ ಸಂಭ್ರಮ.

ಇಂದು (ಆಗಸ್ಟ್ 12) ವಿಶ್ವ ಆನೆಗಳ ದಿನಾಚರಣೆ ಹಿನ್ನೆಲೆ ಗಾಜನೂರು ಸಮೀಪದ ಸಕ್ರೆಬೈಲು ಬಿಡಾರದ ಆನೆಗಳಿಗೆ ವಿಶೇಷ ಸಿಂಗಾರ ಮಾಡುತ್ತಿರುವ ಮಾವುತರು. ಆನೆಗಳನ್ನು ಚನ್ನಾಗಿ ತೊಳೆದು ಅವುಗಳಿಗೆ ಚಿತ್ತಾರವನ್ನು ಬಿಡಿಸಿ, ಹೂವು ಮತ್ತು ವಿಶೇಷ ರೀತಿಯ ಹೊದಿಕೆಗಳನ್ನು ಹಾಕಿ ಆನೆಗಳಿಗೆ ಅಲಂಕಾರ ಮಾಡಿದ್ದ ಕಾವಾಡಿಗರು.

ಇದನ್ನು ಓದಿ : ತನಿಖೆಗೆ ಬಂದ ಅಧಿಕಾರಿಗಳ ಮುಂದೆ ತಹಶಿಲ್ದಾರ್​ ವಿರುದ್ದ ಆರೋಗಳ ಸುರಿಮಳೆ!

ಆನೆ ದಿನಾಚರಣೆ ಸಂಭ್ರಮದಲ್ಲಿ ಭಾಗಿಯಾಗಿದ್ದ ಸಾವಿರಾರು ಪ್ರವಾಸಿಗರು. ಬಳಿಕ ಆನೆಗಳಿಗೆ ಪೂಜೆ ಸಲ್ಲಿಸಿ, ಬಂದ ಪ್ರವಾಸಿಗರಿಗೆ ಹಾಗೂ ಶಾಲಾ ಮಕ್ಕಳಿಗೆ ವಿಶೇಷ ಆಹಾರ ನೀಡಲಾಯಿತು. ವನ್ಯಜೀವಿ ವಿಭಾಗದ ಡಿಎಫ್ಓ ಪ್ರಸನ್ನ ಪಟಗಾರ್ ಮತ್ತು ಎಸಿಎಫ್ ಸುರೇಶ್ ಅಧಿಕಾರಿಗಳ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು.

ಬಳಿಕ ಜಿಲ್ಲೆಯ ವಿವಿಧ ಶಾಲಾ ಮಕ್ಕಳಿಂದ ವನ್ಯಜೀವಿ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಜಾಥಾ ಕಾರ್ಯಕ್ರಮ ಆಯೋಜಿಸಿದ್ದ ಅಧಿಕಾರಿಗಳು.

Exit mobile version