Site icon PowerTV

WI vs IND : ಟೀಂ ಇಂಡಿಯಾಗೆ 179 ಟಾರ್ಗೆಟ್

ಬೆಂಗಳೂರು : ಟೀಂ ಇಂಡಿಯಾ ವಿರುದ್ಧದ ನಾಲ್ಕನೇ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಭಾರತಕ್ಕೆ 179 ರನ್​ ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ನಿಗದಿತ 20 ಓವರ್​ ಗಳಲ್ಲಿ 8 ವಿಕೆಟ್ ಕಳೆದುಕೊಂಡು 178 ರನ್​ ಕಲೆಹಾಕಿದೆ.

ವೆಸ್ಟ್​ ಇಂಡೀಸ್​ ಪರ ಶಾಯ್ ಹೋಪ್ 61, ಶಿಮ್ರಾನ್ ಹೆಟ್ಮೆಯರ್ 54, ಬ್ರಾಂಡನ್ ಕಿಂಗ್ 18, ಕೈಲ್ ಮೇಯರ್ಸ್ 17 ರನ್​ಗಳಿಸಿದರು. ಟೀಂ ಇಂಡಿಯಾ ಪರ ಅರ್ಷದೀಪ್ ಸಿಂಗ್ 3, ಕುಲದೀಪ್ ಯಾದವ್ 2, ಅಕ್ಷರ್ ಪಟೇಲ್, ಮುಖೇಶ್ ಕುಮಾರ್ ಹಾಗೂ ಚಹಲ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

ಸರಣಿ ಮೇಲೆ ವಿಂಡೀಸ್ ಕಣ್ಣು

ಇಂದಿನ ಪಂದ್ಯ ಟೀಂ ಇಂಡಿಯಾ ಪಾಲಿಗೆ ‘ಮಾಡು ಇಲ್ಲವೆ ಮಡಿ’ ಪಂದ್ಯವಾಗಿದೆ. ಮತ್ತೊಂದೆಡೆ, ಈ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳಲು ವಿಂಡೀಸ್ ಹವಣಿಸುತ್ತಿದೆ. ಈ ಪಂದ್ಯ ಗೆದ್ದರೆ ಮಾತ್ರ ಭಾರತ ಸರಣಿಯಲ್ಲಿ 2-2ರಿಂದ ಸಮಬಲ ಸಾಧಿಸಲಿದೆ. ಒಂದು ವೇಳೆ ಸೋತರೆ, ಅತಿಥೇಯ ತಂಡ ಸರಣಿ ಜಯಿಸಲಿದೆ.

Exit mobile version