Site icon PowerTV

40%ಗೂ ಬೆಂಕಿ ಬಿದ್ದಿರೋದಕ್ಕೂ ಏನೂ ಸಂಬಂಧ ಇಲ್ಲ : ರಾಮಲಿಂಗಾರೆಡ್ಡಿ

ಬೆಂಗಳೂರು : 40% ಕಮಿಷನ್​ಗೂ ಬೆಂಕಿ ಬಿದ್ದಿರೋದಕ್ಕೂ ಏನೂ ಸಂಬಂಧ ಇಲ್ಲ ಅಂತಾ ಅನಿಸುತ್ತೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಬಿಎಂಪಿ ಅಗ್ನಿ ದುರಂತ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಗಾಯಾಳುಗಳಿಗೆ ಬೆಸ್ಟ್ ಟ್ರೀಟ್ಮೆಂಟ್ ಕೊಡಲು ಹೇಳಿದ್ದೇವೆ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಾನು ಆಸ್ಪತ್ರೆಗೆ ಹೋಗಿದ್ವಿ. ಎಲ್ಲವನ್ನೂ ಪಾಲಿಕೆಯೇ ಭರಿಸಲಿದೆ. ಕಡತಗಳು ಏನಾದ್ರೂ ನಾಶ ಆಗಿದಿದ್ರೆ ಊಹೆ ಮಾಡಬಹುದಿತ್ತು. ಇದ್ದಿದ್ರೆ ನಾನೇ ನೇರವಾಗಿ ಹೇಳ್ತಿದ್ದೆ. ಬಿಜೆಪಿಯವರ ತರಹ ನಾನು ಹೇಳೋದಕ್ಕೆ ಹೋಗಲ್ಲ ಎಂದು ತಿಳಿಸಿದ್ದಾರೆ.

ಮರಳು, ಮಣ್ಣು ಹಾಕಬೇಕಿತ್ತು

ನೌಕರರ ಮುಖ, ಕೈಗಳೆಲ್ಲಾ ಸುಟ್ಟಿವೆ. ಕ್ವಾಲಿಟಿ ಚೆಕ್ ಮಾಡಲು ಡಾಂಬರು ಸ್ಯಾಂಪಲ್, ಸೀಮೆಂಟ್ ಇಡಲಾಗಿತ್ತು. ಅದನ್ನೆಲ್ಲಾ ಕರಗಿಸಲು ಕೆಮಿಕಲ್ ಬಳಸುತ್ತಾರೆ. ಆ ಸಂದರ್ಭದಲ್ಲಿ ಬೆಂಕಿ ತಗುಲಿ ಅವಘಡ ಸಂಭವಿಸಿದೆ. ಕೆಲವರು ಆಚೆ ಹೋಗಿ ನೀರು ಹಾಕಿದ್ದಾರೆ. ನೀರು ಹಾಕಿದ್ದರಿಂದ ಬೆಂಕಿ ಜಾಸ್ತಿ ಆಗಿದೆ, ಮರಳು, ಮಣ್ಣು ಹಾಕಬೇಕಿತ್ತು ಎಂದು ಹೇಳಿದ್ದಾರೆ.

Exit mobile version