Site icon PowerTV

ನಾನು ಎಳೆ ಮಗುವೂ ಅಲ್ಲ.. ದಡ್ಡನೂ ಅಲ್ಲ : ವಿ. ಸೋಮಣ್ಣ

ಬೆಂಗಳೂರು : ನಾನು ಎಳೆ ಮಗುವೂ ಅಲ್ಲ.. ದಡ್ಡನೂ ಅಲ್ಲ ಎಂದು ಮಾಜಿ ಸಚಿವ ವಿ. ಸೋಮಣ್ಣ ಮಾರ್ಮಿಕವಾಗಿ ನುಡಿದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರಾಜ್ಯಕ್ಕೆ ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲಿ ಅಂತ ಹೇಳಿದವನು ನಾನೊಬ್ಬನೇ.. ಬಿಜೆಪಿಯವನಾಗಿ ಹೇಳುತ್ತಿದ್ದೇನೆ. ಡಿಕೆಶಿ ಅವರಿಗೆ ಮಾನವೀಯತೆ ಇದೆ ಎಂದು ಡಿಕೆಶಿ ಪರ ಬ್ಯಾಟ್ ಬೀಸಿದ್ದಾರೆ.

ಬಿಬಿಎಂಪಿ ಅಗ್ನಿ ದುರಂತ ಪ್ರಕರಣ ಕುರಿತು ಮಾತನಾಡಿ, ಇದನ್ನು ಬಿಜೆಪಿಯವರ ಮುಖದ ಮೇಲೆ ಎರಚೋದು ಬೇಡ. ನಿಮ್ಮದೇ ಸರ್ಕಾರ ಇದೆ, ತನಿಖೆ ಮಾಡಿಸಿ. ಘಟನೆ ಯಾಕಾಯ್ತು ಪತ್ತೆ ಹಚ್ಚಿ. ನಿಮ್ಮ ಮಾತನ್ನೇ ಪೊಲೀಸರೂ ಕೇಳೋದು. ನೀವು ಹೇಳೋದೇ ಅವರು ಹೇಳಬಹುದು. ತನಿಖೆ ಪಾರದರ್ಶಕವಾಗಿರಲಿ ಎಂದು ನಯವಾಗಿಯೇ ಚಾಟಿ ಬೀಸಿದ್ದಾರೆ.

ನೀವೇ ನಮ್ಮ ವಿರುದ್ಧ ಗುಂಡಿ ತೋಡಿದ್ರಿ

ಗುತ್ತಿಗೆದಾರರು ಹೇಳಿದ್ದೆಲ್ಲ‌ ಸತ್ಯ ಅಂತ ಆಗ ನೀವೇ ಹೇಳ್ರಿದ್ರಿ. ನೀವೇ ನಮ್ಮ ವಿರುದ್ಧ ಗುಂಡಿ ತೋಡಿದ್ರಿ. ನಾವು ಮಾಡಿಲ್ಲ, ಗೊತ್ತಿಲ್ಲ. ಇವತ್ತು ಆ ಗುಂಡಿ ಇನ್ನಷ್ಟು ಸ್ವಲ್ಪ ಜಾಸ್ತಿ ಆಗಿದೆ ಎಂದು ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ.

Exit mobile version