Site icon PowerTV

ಪೊಂಗಲ್​ನಲ್ಲಿ ಮಾದಕ ಔಷಧಿ ಬೇರಿಸಿ, ವೃದ್ಧೆ ದುಡ್ಡು-ಮೊಬೈಲ್ ಕದ್ದ ಕಳ್ಳರು

ಚಾಮರಾಜನಗರ : ಪೊಂಗಲ್​​​ನಲ್ಲಿ ಮಾದಕ ಔಷಧಿ ಬೇರಿಸಿ, ಪ್ರಜ್ಞೆ ತಪ್ಪಿಸಿ ವೃದ್ದೆಯ ಹತ್ತಿರವಿದ್ದ ಹಣ ಮತ್ತು ಮೊಬೈಲ್ ದೋಚಿ ಪರಾರಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.

70 ವರ್ಷದ ರತ್ನಮ್ಮ ಎಂಬ ವೃದ್ದೆ ಮಲೈಮಹದೇಶ್ವರ ಬೆಟ್ಟಕ್ಕೆ ದೇವರ ದರ್ಶನ ಪಡೆಯಲು ಬಂದಾಗ ಈ ಘಟನೆ ನಡೆದಿದೆ. ಮತ್ತು ಬರಿಸುವ ಔಷಧಿಯನ್ನು ಪೊಂಗಲ್​​ನಲ್ಲಿ ಬೆರೆಸಿ ತಿನ್ನಿಸಿದ ನಂತರ ಕಿರಾತಕರು ಆಸ್ಪತ್ರೆ ಬಳಿ ಬಿಟ್ಟು ಹೋಗಿದ್ದಾರೆ.

ಒಬ್ಬರೇ ಮಲೈ ಮಾದೇಶ್ವರ ಬೆಟ್ಟಕ್ಕೆ ಮಾದಪ್ಪನ ದರ್ಶನ ಪಡೆಯಲು ಬಂದಿದ್ದನ್ನು ತಿಳಿದ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ಮಲೈಮಹದೇಶ್ವರ ಬೆಟ್ಟದಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಪ್ರಾಧಿಕಾರವು ದೇವಸ್ಥಾನದ ಅಭಿವೃದ್ಧಿ ಹಾಗೂ ಆದಾಯವಷ್ಟೇ ಅಲ್ಲದೇ ಭಕ್ತರ ಭದ್ರತೆಯ ಬಗ್ಗೆನೂ ಗಮನಹರಿಸಬೇಕಾಗಿದೆ‌‌‌ ಎಂದು ಭಕ್ತರು ಮನವಿ ಮಾಡಿದ್ದಾರೆ.

Exit mobile version