Site icon PowerTV

ಹಾವು ಕಚ್ಚಿ ಮೃತಪಟ್ಟ ಬಾಲಕಿ

ವಿಜಯಪುರ : ಹಾವು ಕಚ್ಚಿ ಬಾಲಕಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೋಲಾರ ತಾಲೂಕಿನ ಮಟ್ಟಿಹಾಳ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಭಾಗ್ಯಶ್ರೀ ಈರಪ್ಪ ಬಿರಾದಾರ (14) ಮೃತ ಬಾಲಕಿ. ನಿನ್ನೆ (ಗುರುವಾರ) ತಡರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಮನೆ ಒಳಗೆ ನುಗ್ಗಿದ್ದ ಹಾವೊಂದು ಬಾಲಕಿಯ ಕಾಲಿಗೆ ಕಚ್ಚಿದೆ. ತಕ್ಷಣ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಮಾರ್ಗದ ಮಧ್ಯದಲ್ಲಿಯೇ ಭಾಗ್ಯಶ್ರೀ ಸಾವನ್ನಪ್ಪಿದ್ದಾಳೆ.

ಇದನ್ನು ಓದಿ : ಒಂದು ರೂಪಾಯಿಗೆ ಒಂದು ಇಡ್ಲಿ; ಸಿಕ್ಕಾಪಟ್ಟೆ ಡಿಮ್ಯಾಂಡ್​ ಎಲ್ಲಿ ಗೊತ್ತಾ?

ಬಾಲಕಿ ಉತ್ತಮ ಖೋಖೋ ಪಟುವಾಗಿದ್ದು, ಇಂದು (ಶುಕ್ರವಾರ) ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಬೇಕಿತ್ತು. ದುರಾದೃಷ್ಟವಶಾತ್ ಬಾಲಕಿ ಮೃತಪಟ್ಟಿದ್ದು, ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಘಟನೆ ಕೋಲಾರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Exit mobile version