Site icon PowerTV

ರೇವಣ್ಣರ ಆಪ್ತನ ಹತ್ಯೆ : ಮೂವರು ಲೇಡಿ ಸೇರಿ ಆರು ಜನರ ಬಂಧನ

ಹಾಸನ : ಆಗಸ್ಟ್ 9ರಂದು ನಡೆದಿದ್ದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಪ್ತ ಹಾಗೂ ಜೆಡಿಎಸ್ ಮುಖಂಡ ಕೃಷ್ಣೇಗೌಡ ಹತ್ಯೆ ಪ್ರಕರಣ ಸಂಬಂಧ ಕೊಲೆ ಆರೋಪದಲ್ಲಿ ಆರು ಜನರನ್ನು ಬಂಧಿಸಲಾಗಿದೆ.

ಸುರೇಶ್, ಕೃಷ್ಣಕುಮಾರ್, ಸಂಜಯ್, ಸುಧಾರಾಣಿ, ಅಶ್ವಿನಿ, ಚೈತ್ರ ಬಂಧಿತ ಆರೋಪಿಗಳು. ಕೃಷ್ಣೇಗೌಡ ನಡುವಿನ ಜಗಳವೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ.

ಕೃಷ್ಣೇಗೌಡ ಜೊತೆಗೆ ಸ್ನೇಹ ಸಂಪಾದನೆ ಮಾಡಿ ಒಂದು ಸ್ಥಳೀಯ ಚಾನಲ್ ಹಾಗೂ ಸಿನಿಮಾಗೆ ಯೋಗಾನಂದ್ ಹೂಡಿಕೆ ಮಾಡಿಸಿದ್ದ. ಕೋಟಿ ಕೋಟಿ ಹೂಡಿಕೆ ಮಾಡಿಸಿ ವಂಚನೆ ಮಾಡಿದ ಆರೋಪದಲ್ಲಿ ಯೋಗಾನಂದ್ ಜೊತೆ ಕೃಷ್ಣೇಗೌಡ ಜಗಳ ಮಾಡಿಕೊಂಡಿದ್ದ.

ಕೊಲೆಗೆ ಸ್ಕೆಚ್ ಹಾಕಿದ್ದು ಯಾಕೆ?

ಇದೇ ವಿಚಾರದಲ್ಲಿ 2022ರ ನವೆಂಬರ್​ನಲ್ಲಿ ಯೋಗಾನಂದ್​ನನ್ನು ಅಪಹರಿಸಿ ಹಲ್ಲೆ ಮಾಡಿದ ಬಗ್ಗೆ ಹಾಸನ ಗ್ರಾಮಾಂತರ ಠಾಣೆಗೆ ಯೋಗಾನಂದ್ ದೂರು ನೀಡಿದ್ದ. ಪ್ರತಿಯಾಗಿ ಯೋಗಾನಂದ್ ವಿರುದ್ಧ ವಂಚನೆ ಆರೋಪದಲ್ಲಿ ಕೃಷ್ಣೇಗೌಡ  ದೂರು ನೀಡಿದ್ದರು. ಇದೇ ವಿಚಾರದಲ್ಲಿ ಕೃಷ್ಣೇಗೌಡನನ್ನ ಕೊಲೆ ಮಾಡಿದರೆ ಕೋಟಿ ಕೋಟಿ ಹಣ ಕೊಡೋದು ಉಳಿಯಲಿದೆ ಎಂದು ಕೊಲೆಗೆ ಸ್ಕೆಚ್ ಹಾಕಲಾಗಿತ್ತು.

Exit mobile version