Site icon PowerTV

ಒಂದು ರೂಪಾಯಿಗೆ ಒಂದು ಇಡ್ಲಿ; ಸಿಕ್ಕಾಪಟ್ಟೆ ಡಿಮ್ಯಾಂಡ್​ ಎಲ್ಲಿ ಗೊತ್ತಾ?

ತುಮಕೂರು : ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವ ಸಂದರ್ಭದಲ್ಲಿ ಯಾವುದೇ ಲಾಭಾಪೇಕ್ಷೆ ಇಲ್ಲದೇ ಬಡವರ ಪಾಲಿಗೆ ಹಸಿವನ್ನು ನೀಗಿಸಲು ಕೇವಲ 1 ರೂಪಾಯಿಗೆ 1 ಇಡ್ಲಿ ಮಾರಿ ಕಾಂತಮ್ಮ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಗ್ರಾಮದ ಕಾಂತಮ್ಮ, ಕಳೆದ 20 ವರ್ಷಗಳಿಂದ ಇಡ್ಲಿ ವ್ಯಾಪಾರ ಮಾಡಿತ್ತಿದ್ದಾರೆ, 25 ಪೈಸೆಯಿಂದ ಇಡ್ಲಿ ಮಾರಾಟ ಆರಂಭಿಸಿ ಇಂದು 1ರುಪಾಯಿ ಮಾರಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸಿಸಿಬಿ ಪೊಲೀಸರಿಂದ ಪುನೀತ್​ ಕೆರೆಹಳ್ಳಿ ಬಂಧನ!

ಇವರು ಆಗರ್ಭ ಶ್ರೀಮಂತರಲ್ಲ, ಯಾವುದೇ ಆದಾಯದ ಮೂಲವು ಇಲ್ಲ, ಬಡತನ ಬೇಗೆಯಲ್ಲಿ ಮುಳುಗೆದ್ದಿರುವ ಇವರಿಗೆ ಹಸಿವಿನ ಬೆಲೆ ಗೊತ್ತು, ಅತಿ ದುರಾಸೆಗೆ ಹೋಗದೇ ಬಂದಷ್ಟೆ ಲಾಭ ಎನ್ನುವಂತೆ ಇಡ್ಲಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಯಾವುದೇ ಕ್ಯಾಂಟೀನ್​ಗೂ ಕಮ್ಮಿ ಇಲ್ಲ ಈ ಹೆಸರಿಲ್ಲದ ಕಾಂತಮ್ಮ ಕ್ಯಾಂಟೀನ್​, ಮನೆಯಲ್ಲಿಯೇ ಇಡ್ಲಿ ತಯಾರಿಸಿ ಮಾರಾಟ ಮಾಡುತ್ತಾರೆ,  ಅಲ್ಲೇ ತಿನ್ನುವವರಿಗೂ ಅವಕಾಶವಿದೆ. ಅಷ್ಟೆ ಅಲ್ಲದೇ ಕರೆ ಮಾಡಿ ಆರ್ಡರ್ ಮಾಡಿದರೆ ಸ್ವತಃ ಇವರೇ ಮನೆ ಬಾಗಿಲಿಗೆ ಇಡ್ಲಿ ತಲುಪಿಸುತ್ತಾರೆ.

ಪ್ರತಿ ದಿನ ಬೆಳಗ್ಗೆ ನಾವು ಕಾಂತಮ್ಮನ ಮನೆಯ ಇಡ್ಲಿ ರುಚಿಯನ್ನು ಸವಿಯುತ್ತೇವೆ, ಇಲ್ಲಿ ಒಂದು ರುಪಾಯಿಗೆ ಒಂದು ಇಡ್ಲಿ ಸಿಗುತ್ತಿದ್ದು ಹೊಟ್ಟೆ ತುಂಬಾ ರುಚಿಕರ ಇಡ್ಲಿ ಸೇವಿಸೋದಕ್ಕೆ ತುಂಬಾ ಖುಷಿಯಾಗುತ್ತದೇ ಎನ್ನುತ್ತಾರೆ ಇಡ್ಲಿ ಪ್ರಿಯರಾದ : ಧನುಷ್​ ರಂಗಣ್ಣ.

Exit mobile version