Site icon PowerTV

ಯುವತಿ ಅತ್ಯಾಚಾರವೆಸಗಿ ಕೊಲೆ : ಒಡಿಶಾ ಮೂಲದ ಆರೋಪಿ ಬಂಧನ

ಬೆಂಗಳೂರು : ಮಹದೇವಪುರದಲ್ಲಿ ಯುವತಿ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕಲಬುರಗಿ ಮಹಾನಂದಾ ಕೊಲೆಯಾದ ಯುವತಿ. ಕೊಲೆ ಆರೋಪಿ ಕೃಷ್ಣ ಚಂದ್​ ಸೇಟಿಯನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಾಣೆಯಾಗಿದ್ದ ಯುವತಿಯ ಮೃತದೇಹ ಮರುದಿನ ಬೆಂಗಳೂರಿನ ಮಹದೇವಪುರದ ಲಕ್ಷ್ಮಿ ಸಾಗರ ಲೇಔಟ್​ನ ಮನೆ ಮುಂದೆ ಪತ್ತೆಯಾಗಿದ್ದ ಪ್ರಕಣರವನ್ನು ಪೊಲೀಸರು ಭೇದಿಸಿದ್ದಾರೆ. ಯುವತಿಯನ್ನು ಕೊಲೆ ಮಾಡಿ ಆರೋಪಿ ಮನೆ ಮುಂದೆ ಶವ ಇಟ್ಟು ಹೋಗಿದ್ದಾನೆ ಎಂಬುವುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.

ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ

ಕಲಬುರಗಿ ಮೂಲದ ಮಹಾನಂದಾ ಹಾಗೂ ಆಕೆಯ ಅಕ್ಕ ಇಬ್ಬರೂ ಶೆಲ್ ಪೆಟ್ರೋಲ್ ಬಂಕ್​​ನಲ್ಲಿ ಕೆಲಸ ಮಾಡುತ್ತಿದ್ದರು. ಇವರು ಮಹದೇವಪುರದ ಲಕ್ಷ್ಮಿ ಸಾಗರ ಲೇಔಟ್​​ನಲ್ಲಿ ವಾಸಿಸುತ್ತಿದ್ದರು. ಇವರ ಪಕ್ಕದ ಮನೆಯಲ್ಲಿ ಒಡಿಶಾ ಮೂಲದ ಕೃಷ್ಣ ಚಂದ ಸೇಟಿ ಎಂಬವನು ವಾಸವಿದ್ದಾನೆ. ಈತ ಟೆಕ್ ಪಾರ್ಕ್​​ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು.

ಮಹಾನಂದಾ ಆಗಸ್ಟ್​​ 10 ರಂದು ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದರು. ಯುವತಿ ಪಕ್ಕದ ಮನೆಯ ಬಾಗಿಲ ಬಳಿ ಬಂದಾಗ ಆರೋಪಿ ಕೃಷ್ಣ ಚಂದ್​ ಸಾಟಿ ಮಹಾನಂದ ಮನೆಯೊಳಗೆ ಎಳೆದುಕೊಂಡು ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಯುವತಿ ನಿರಾಕರಿಸಿ ಕಿರುಚಾಡಲು ಯತ್ನಿಸಿದ್ದಾರೆ. ಈ ವೇಳೆ ಆತ ಈ ಕೃತ್ಯ ಎಸೆಗಿದ್ದಾನೆ.

Exit mobile version