Site icon PowerTV

ಜೈ ಹೋ.. ಐತಿಹಾಸಿಕ ಜಯ, ಭಾರತ ಚಾಂಪಿಯನ್

ಬೆಂಗಳೂರು : ಏಷ್ಯನ್ ಚಾಂಪಿಯನ್ ಟ್ರೋಪಿ ಹಾಕಿ ಟೂರ್ನಿಯಲ್ಲಿ ಭಾರತ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಮಲೇಷ್ಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ 4-3 ಅಂತರದ ಗೋಲು ದಾಖಲಿಸುವ ಮೂಲಕ ಅದ್ಭುತ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿತು.

ಈ ಗೆಲುವಿನೊಂದಿಗೆ ಭಾರತ ನಾಲ್ಕನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇದಕ್ಕೂ ಮುನ್ನ ಮೂರು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

2011ರ ಚೊಚ್ಚಲ ಆವೃತ್ತಿ, 2016ರಲ್ಲಿ ಚಾಂಪಿಯನ್, ಬಳಿಕ 2018ರಲ್ಲಿ ಪಾಕಿಸ್ತಾನ ಜೊತೆ ಜಂಟಿಯಾಗಿ ಚಾಂಪಿಯನ್ ಆಗಿ ಭಾರತ್ ಪ್ರಶ್ತಿ ಮುಡಿಗೇರಿಸಿಕೊಂಡಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ಭಾರತ ಚಾಂಪಿಯನ್ ಆಗಿದೆ.

ಪಂದ್ಯ ವೀಕ್ಷಿಸಿದ ಅನುರಾಗ್​

ಕೇಂದ್ರಕ್ರಿಡಾ ಸಚಿವ ಅನುರಾಗ್ ಠಾಕೂರ್ ಅವರು ಚೆನ್ನೈನ ಮೇಯರ್ ರಾಧಾಕೃಷ್ಣನ್ ಹಾಕಿ ಕ್ರೀಡಾಂಗಣಕ್ಕೆ ಆಗಮಿಸಿ ಭಾರತ ಮತ್ತು ಮಲೇಷ್ಯಾ ಹಾಕಿ ತಂಡಗಳ ನಡುವೆ ಇಂದು ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯವನ್ನು ವೀಕ್ಷಿಸಿದರು. ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟ್ಯಾಲಿನ್ ಅವರು ಪುಸ್ತಕವೊಂದನ್ನು ನೀಡಿ ಸ್ವಾಗತಿಸಿದರು.

Exit mobile version