Site icon PowerTV

ವಿದ್ಯುತ್ ಅವಘಡ ; ಕುಟುಂಬದ ಮೂವರು ದುರ್ಮರಣ

ಬೆಳಗಾವಿ : ಮೊಮ್ಮಗಳ ಪ್ರಾಣ ಉಳಿಸಲು ಹೋಗಿ ಮೊಮ್ಮಗಳ ಜೊತೆ ಅಜ್ಜ ಮತ್ತು ಅಜ್ಜಿ ಮೂವರು ಸಾವನ್ನಪ್ಪಿರುವ ದುರ್ಘಟನೆ ಬೆಳಗಾವಿಯ ಶಾಹುನಗರದ ಮೊದಲನೇ ಕ್ರಾಸ್​ನಲ್ಲಿ ನಡೆದಿದೆ.

ಈರಪ್ಪ ಗಂಗಪ್ಪ ರಾಥೋಡ (55), ಶಾಂತವ್ವ ಈರಪ್ಪ ರಾಥೋಡ (50) ಮೃತಪಟ್ಟ ದಂಪತಿ. ಬೆಳಗಾವಿಯಲ್ಲಿ ನಿರ್ಮಾಣ ನಡೆಯುತ್ತಿದ್ದ ಮನೆಯೊಂದರಲ್ಲಿ ವಾಚ್​ಮ್ಯಾನ್ ಕೆಲಸ ಮಾಡುತ್ತಿದ್ದ ರಾಥೋಡ ದಂಪತಿಗಳು. ತನ್ನ ಮೊಮ್ಮಗಳಾದ ಅನ್ನಪೂರ್ಣ ಹೊನ್ನಪ್ಪ ಲಮಾಣಿ (8) ಮೃತ ಬಾಲಕಿ. ಕೆಲಸದ ಜಾಗಕ್ಕೆ ಕರೆದುಕೊಂಡು ಬಂದಿದ್ದರು. ಈ ವೇಳೆ ನಿರ್ಮಾಣ ಹಂತದ ಕಟ್ಟಡದ ಬೋರವೆಲ್​ನ ಬಳಿ ಆಟವಾಡಲು ಹೋಗಿದ್ದು, ಮೊಮ್ಮಗಳನ್ನು ರಕ್ಷಿಸಲು ಹೋಗಿ ವಿದ್ಯುತ್ ತಂತಿ ತಗುಲಿ ಮೂವರು ಸಾವನ್ನಪ್ಪಿದ್ದಾರೆ.

ಇದನ್ನು ಓದಿ : ನಗರದ ಪ್ರತಿ ಮನೆ ಮೇಲೂ ತಿರಂಗ ಧ್ವಜ ಹಾರಟ : ತುಷಾರ್​ ಗಿರಿನಾಥ್​

ಮೃತರು ಜಿಲ್ಲೆಯ ರಾಮದುರ್ಗ ತಾಲೂಕಿನ ಅರಗಂಚಿ ತಾಂಡಾದ ನಿವಾಸಿಗಳಾಗಿದ್ದು, ಮೊಮ್ಮಗಳಾದ ಅನ್ನಪೂರ್ಣಳ ಶಿಕ್ಷಣಕ್ಕಾಗಿ ತಮ್ಮ ಬಳಿ ಇರಿಸಿಕೊಂಡಿದ್ದ ದಂಪತಿಗಳು. ದುರಾದೃಷ್ಟವಶಾತ್ ವಿದ್ಯುತ್ ಅವಘಡಕ್ಕೆ ಮೂವರು ಪ್ರಾಣಾ ಕಳೆದುಕೊಂಡಿದ್ದಾರೆ. ಸುದ್ಧಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ರಾಥೋಡ್ ಕುಟುಂಬ ಹಾಗೂ ಅವರ ಸಂಬಂಧಿಗಳು ಆಗಮಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಎಪಿಎಂಸಿ ಪೋಲಿಸರು.

Exit mobile version