Site icon PowerTV

40% ಆರೋಪ ಸಾಬೀತು ಮಾಡಲಾರದೆ, ನೀವೇ ಬೆಂಕಿ ಹಚ್ಚಿರಬೇಕು : ಶಾಸಕ ಯತ್ನಾಳ್

ವಿಜಯಪುರ : ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಲ್ಯಾಬ್​​​​​​ನಲ್ಲಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ.

ನಿಮ್ಮ ಸರ್ಕಾರ, ನಿಮ್ಮ ಅಧಿಕಾರಿಗಳು ಹಾಗೂ ನಿಮ್ಮದೇ ಆಡಳಿತ. ಬೆಂಕಿ ಹಚ್ಚುವ ಕೆಲಸ ನಿಮ್ಮದೇ ಇರಬೇಕು ಎಂದು ಟ್ವೀಟ್​ ಮೂಲಕ ಕಾಂಗ್ರೆಸ್ ವಿರುದ್ಧ ಶಾಸಕ ಯತ್ನಾಳ್​ ವಾಗ್ದಾಳಿ ನಡೆಸಿದ್ದಾರೆ.

ನಿಮ್ಮದು ಕಡತಗಳನ್ನು ರಕ್ಷಿಸಲು ಆಗದ ಸರ್ಕಾರವೇ ಎಂದು ಕಿಡಿಕಾರಿದ್ದಾರೆ. 40% ಆರೋಪ ಸಾಬೀತು ಮಾಡಲಾರದೆ ನೀವೇ ಬೆಂಕಿ ಹಚ್ಚಿರಬೇಕು. ಬೆಂಕಿ ಬಿದ್ದಿದೆ ಎಂದರೆ ನಿಮ್ಮ ಕೈಲಾಗದ ಆಡಳಿತಕ್ಕೆ ಹಿಡಿದ ಕನ್ನಡಿ ಎಂದು ಟ್ವೀಟ್ ಮಾಡಿದ್ದಾರೆ.

ಲಂಗು ಲಗಾಮು ಇಲ್ಲದ ಅಯೋಗ್ಯರು

ಕಾಂಗ್ರೆಸ್ ಪಕ್ಷಕ್ಕೆ  ಹೇಗೆ ಆರೋಪ ಮಾಡಿ ಓಡಿ ಹೋಗುವುದು ರೂಢಿಯೊ ಹಾಗೆ ಅವರ ಟ್ವಿಟ್ಟರ್ ಹ್ಯಾಂಡಲ್ ಸಹ. ಲಂಗು ಲಗಾಮು ಇಲ್ಲದ ಅಯೋಗ್ಯರು ಬಾಯಿಗೆ ಬಂದದ್ದು ಬರೆಯುವುದು ಅದರ ಸತ್ಯತೆಯ ಬಗ್ಗೆ ನಾವು ಬರೆದಾಗ ಟ್ವೀಟ್ ಡಿಲೀಟ್ ಮಾಡಿ ಓಡಿ  ಹೋಗುವುದು ಎಂದು ಕುಟುಕಿದ್ದಾರೆ.

ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಮಹಾನುಭಾವ ಒಬ್ಬರಿದ್ದರಲ್ಲವೇ? ಎಲ್ಲಿ ಮಾಯವಾಗಿದ್ದಾರೆ? ಎಂದು ಟಾಂಗ್ ಕೊಟ್ಟಿದ್ದಾರೆ.

Exit mobile version