Site icon PowerTV

ರೀಲ್ಸ್​​ ಗೀಳು : ಪತ್ನಿಯನ್ನು ಕೊಂದು ನದಿಗೆ ಎಸೆದ ಪತಿ ಮತ್ತು ಮಾವ!

ಮಂಡ್ಯ : ಅತಿಯಾದ ಮೊಬೈಲ್​ ಗೀಳಿಗೆ ಬಿದ್ದ ಪತ್ನಿ ನಡೆಯಲ್ಲಿ ಅನುಮಾನಗೊಂಡ ಪತಿರಾಯ, ತನ್ನ ಹೆಂಡತಿಯನ್ನ ಕೊಲೆ ಮಾಡಿ ಮಾವನೊಂದಿಗೆ ಜೊತೆಗೂಡಿ ಶವವನ್ನು ನದಿಗೆ ಎಸೆದಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಮಂಡ್ಯಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಪೂಜಾ (26) ಗಂಡನಿಂದಲೇ ಕೊಲೆಯಾದ ಮಹಿಳೆ. ಶ್ರೀನಾಥ್ (33) ಕೊಲೆ ಮಾಡಿದ ಪತಿ, ಮೊಬೈಲ್​ ನಲ್ಲಿ ರೀಲ್ಸ್​ ಮಾಡುವ ಜೊತೆಗೆ ಸ್ನೇಹಿತರೊಂದಿಗೆ ಚಾಂಟಿಂಗ್​ನಲ್ಲಿ ಕಾಲ ಕಳೆಯುತ್ತಿದ್ದ ಪತ್ನಿಯ ನಡೆಯಲ್ಲಿ ಅನುಮಾನಗೊಂಡ ಪತಿ, ತನ್ನ ಪತ್ನಿಯನ್ನೇ ಅವಳ ವೇಲ್​ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ: ಯಾವ ಕಾರಣಕ್ಕು ರಾಜಿಯಾಗುವ ಮಾತೆ ಇಲ್ಲ- ನಟ ಸುದೀಪ್​

ಕಳೆದ 9 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಪೂಜಾ ಮತ್ತ ಶ್ರೀನಾಥ್​, ಆರಂಭದಲ್ಲಿ ಅನ್ಯೋನ್ಯವಾಗಿ ಬದುಕುತ್ತಿದ್ದ ದಂಪತಿಗೆ ಒಂದು ಹೆಣ್ಣು ಮಗು ಇದೆ. ಕೆಲವು ವರ್ಷಗಳಿಂದ ಟಿಕ್ ಟಾಕ್ ಗೀಳು ಬೆಳೆಸಿಕೊಂಡಿದ್ದ ಪೂಜಾ, ರೀಲ್ಸ್ ಮಾಡುವ ಜೊತೆಗೆ ಹೆಚ್ಚೆಚ್ಚು  ಫೋನ್ ಬಳಕೆ ಮಾಡುತ್ತಿದ್ದರು, ಅತಿಯಾದ ಮೊಬೈಲ್​ ಬಳಕೆಯೇ ಇವರ ಸಂಸಾರಕ್ಕೆ ಕಂಟಕವಾಗಿ ಪರಿಣಮಿಸಿದೆ.

ಪರಪುರುಷನೊಂದಿಗೆ ಸಂಬಂಧ ಹೊಂದಿರುವ ಶಂಕೆಯಿಂದ ಆಗಾಗ ಸಂಸಾರದಲ್ಲಿ ಗಲಾಟೆಗಳು ನಡೆಯಯುತ್ತಿತ್ತು, ಪತ್ನಿಯ ನಡೆಯಿಂದ ಬೇಸತ್ತ ಶ್ರೀನಾಥ್​ ಕುತ್ತಿಗೆಗೆ ವೇಲ್ ನಿಂದ ಬಿಗಿದು ಕೊಲೆಗೈದಿದ್ದಾನೆ ಬಳಿಕೆ ತನ್ನ ಮಾವನ ಸಹಾಯದೊಂದಿಗೆ ಪತ್ನಿಯ ಶವವನ್ನು ಸಾಗಿಸಿ ಕಾವೇರಿ ನದಿಗೆ ಎಸೆದು ಬಂದಿದ್ದರು.

ಘಟನೆಯಾದ ಮೂರು ದಿನಗಳ ಬಳಿಕ ಪೊಲೀಸರಿಗೆ ಕರೆ ಮಾಡಿ ಆರೋಪಿ ಶ್ರೀನಾಥ್​ ಶರಣಾಗಿದ್ದಾನೆ, ಅರಕೆರೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಗಳು ನಡೆಯುತ್ತಿದೆ.

Exit mobile version