Site icon PowerTV

ಬಾಕಿ ಹಣ ಬಿಡುಗಡೆ: ಸರ್ಕಾರಕ್ಕೆ ಆಗಸ್ಟ್​ 31 ಡೆಡ್​ಲೈನ್ – ಕೆಂಪಣ್ಣ!

ಬೆಂಗಳೂರು : ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ ವಿಳಂಬವಾಗಿದ್ದು ಸರ್ಕಾರವನ್ನು ನಂಬಿ ನಾವು ಕೆಲವು ಕಡೆ ಕಾಮಗಾರಿ ಆರಂಭಿಸಿದ್ದೇವೆ, ನಮ್ಮದು ಬಾಣಲೆಯಿಂದ ಬೆಂಕಿಗೆ ಬಿದ್ದ ಪರಿಸ್ಥಿತಿಯಾಗಿದೆ, ಆತ್ಮಹತ್ಯೆ ಒಂದೇ ದಾರಿ ಎಂದು ಗುತ್ತಿಗೆದಾರರ ಸಂಘದ ಅದ್ಯಕ್ಷ ಕೆಂಪಣ್ಣ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ರೀಲ್ಸ್​​ ಗೀಳು : ಪತ್ನಿಯನ್ನು ಕೊಂದು ನದಿಗೆ ಎಸೆದ ಪತಿ ಮತ್ತು ಮಾವ!

ನಗರದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಗುತ್ತಿಗೆದಾರರ ಬಾಕಿಹಣ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನಿನ್ನೆ ಪತ್ರ ಬರೆದಿದ್ದೇನೆ, ಈಗ ಯಾವ ಸಚಿವರೂ ನಮ್ಮ ಬಳಿ ಕಮಿಷನ್‌ ಕೇಳಿಲ್ಲ, ಈ ಕುರಿತು 3 ತಿಂಗಳಿನಿಂದ ಯಾವುದೇ ದೂರುಗಳು ಬಂದಿಲ್ಲ, 3ನೇ ಪಾರ್ಟಿಯವರು ಕಮಿಷನ್‌ ಕೇಳಿದ್ದರೆ ಅದರ ಬಗ್ಗೆ ನಮಗೆ ಗೊತ್ತಿಲ್ಲ ಯಾರೋ ಕೆಲ ಗುತ್ತಿಗೆದಾರರು ಸರ್ಕಾರದ ವಿರುದ್ದ ಆರೋಪಿಸಿದ್ದಾರೆ ಎಂದರು.

ಬಾಕಿ ಹಣ ಬಿಡುಗಡೆ ಸಂಬಂಧ ಈಗಾಗಲೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಸೇರಿದಂತೆ ಸಚಿವರನ್ನ ಭೇಟಿ ಮಾಡಿದ್ದೇವೆ ಮತ್ತು ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ಸಂಘದಿಂದ ಸರ್ಕಾರಕ್ಕೆ ಆಗಸ್ಟ್ 31ರೊಳಗೆ ಬಾಕಿ ಬಿಲ್ ಪಾವತಿಸುವಂತೆ ಡೆಡ್​ಲೈನ್​ ನೀಡಿದ್ದೇವೆ ಎಂದರು.

Exit mobile version