Site icon PowerTV

ಜೋಡೆತ್ತು ಕಳ್ಳತನ; ಜಾಣ ಎತ್ತುಗಳು ರೈತನ ಮನೆಗೆ ಸೇರಿದ್ದೆ ರೋಚಕ!

ಯಾದಗಿರಿ : ಜೋಡೆತ್ತು ಕಳ್ಳತನ ಮಾಡಿದ ಕದೀಮರಿಂದ ತಪ್ಪಿಸಿಕೊಂಡು ಅನ್ನದಾತನ ಮನೆ ಸೇರಿದ ಜಾಣ ಎತ್ತುಗಳು ಘಟನೆ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತ ತಿರುಪತಿ ಎನ್ನುವರಿಗೆ ಸೇರಿದ್ದ ಎರಡು ಎತ್ತುಗಳು. ನಿನ್ನೆ ತಡರಾತ್ರಿ ರೈತ ತಿರುಪತಿ ಮನೆಗೆ ನುಗ್ಗಿ ಎತ್ತುಗಳನ್ನು ಕದ್ದಿದ್ದ ಕಳ್ಳರು. ನನ್ನ ಬೆನ್ನೆಲುಬಾಗಿದ್ದ 1.5 ಲಕ್ಷ ರೂಪಾಯಿ ಬೆಲೆ ಬಾಳುವ ಎತ್ತುಗಳನ್ನು ಕಳೆದುಕೊಂಡೆ ಎಂದು ರೈತನ ಆಕ್ರಂದನ ಮುಗಿಲು ಮುಟ್ಟಿತ್ತು.

ಇದನ್ನು ಓದಿ : ಆನೆ ದಂತ ಮಾರಾಟ ಯತ್ನ ; ಆರೋಪಿ ಬಂಧನ

ರೈತನ ಅಳಲು ಕಂಡು ಎತ್ತುಗಳನ್ನು ಹುಡುಕೋಣ ಎಂದು ರೈತ ತಿರುಪತಿಗೆ ಧೈರ್ಯ ತುಂಬುತ್ತಿದ್ದ ಗ್ರಾಮಸ್ಥರು. ಬಳಿಕ ರೈತ ಎತ್ತುಗಳಿಗಾಗಿ ಕಾಯುತ್ತಾ ಕುಳಿತಿದ್ದ ವೇಳೆ ಕಳ್ಳರಿಂದ ತಪ್ಪಿಸಿಕೊಂಡು ಅಂದಾಜು 10 ಕಿಮೀ ದೂರದಿಂದ ಬಂದು ಮಾಲಿಕನ ಮನೆ ಸೇರಿದ ಜಾಣ ಎತ್ತುಗಳು.

ಬಳಿಕ ಮರಳಿ ಬಂದಿದ್ದ ಎತ್ತುಗಳನ್ನು ಮೈ ಸವರಿ ಪ್ರೀತಿ ತೋರಿ ಸಂತಸ ಪಟ್ಟ ರೈತ ತಿರುಪತಿ.

Exit mobile version