Site icon PowerTV

ಧಾರವಾಡದಲ್ಲಿ ಕ್ರಿಕೆಟಿಗ ಮುರಳೀಧರನ್ ಫ್ಯಾಕ್ಟರಿ: 446 ಕೋಟಿ ಹೂಡಿಕೆ

ಧಾರವಾಡ : ಶ್ರೀಲಂಕಾದ ಖ್ಯಾತ ಕ್ರಿಕೇಟಿಗ ಮುತ್ತಯ್ಯ ಮುರಳೀಧರನ್ ಅವರು ಧಾರವಾಡದಲ್ಲಿ ಕೈಗಾರಿಕೆ ಸ್ಥಾಪಿಸಲು ಮುಂದಾಗಿದ್ದು 446 ಕೋಟಿ ಹೂಡಿಕೆಗೆ ತಯಾರಿ ನಡೆಸುತ್ತಿದ್ದಾರೆ.

ಇದನ್ನೂ ಓದಿ: 60 ಅಡಿ ಆಳಕ್ಕೆ ಬಿದ್ದ ಕಾಡುಕೋಣದ ಮರಿ!:ರಕ್ಷಣೆ

ಅಂತಾರಾಷ್ಟ್ರೀಯ ಕ್ರಿಕೇಟ್​ ಗೆ ವಿದಾಯ ಹೇಳಿದ ಬಳಿಕ ಇದೀಗ ಉದ್ಯಮ ಕ್ಷೇತ್ರದಲ್ಲಿ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಮೆ.ಸಿಲೋನ್ ಬ್ರೆವರೀಜ್ ಕ್ಯಾನ್ ಪ್ರೈವೆಟ್ ಲಿಮಿಟೆಡ್ ಶ್ರೀಲಂಕಾ ಕಂಪನಿ ಯಾಗಿದ್ದು, ಮುತ್ತಯ್ಯ ಮುರಳೀಧರನ್ ಇದರ ಪ್ರವರ್ತಕರಾಗಿದ್ದಾರೆ.

ಇದು ತಂಪು ಪಾನೀಯಗಳನ್ನು ತುಂಬುವ ಅಲ್ಯುಮಿನಿಯಂ ಕ್ಯಾನ್ ತಯಾರಿಕೆ ಕಂಪನಿಯಾಗಿದ್ದು, ಇವುಗಳಿಗೆ ವಿವಿಧ ದೇಶಗಳಲ್ಲಿ ಬಾರಿ ಬೇಡಿಕೆಯೂ ಇದೆ. ಧಾರವಾಡದ ಎಫ್‌ಎಂಸಿಜಿ ಕ್ಲಸ್ಟರ್‌ನಲ್ಲಿ ಇದರ ಘಟಕ ಸ್ಥಾಪಿಸಲು ಅನುಮತಿ ಹಾಗೂ ಸ್ಥಳಾವಕಾಶ ಕೋರಿ ಕರ್ನಾಟಕ ಸರ್ಕಾರಕ್ಕೆ ಕಂಪನಿ ಪ್ರಸ್ತಾವನೆ ಸಲ್ಲಿಸಿತ್ತು.

ಧಾರವಾಡದ ಮುಮ್ಮಿಗಟ್ಟಿ ಪ್ರದೇಶದಲ್ಲಿ 26 ಎಕರೆ ಸ್ಥಳಾವಕಾಶ ನೀಡುವಂತೆ ಮುರಳೀಧರನ್ ಕಂಪನಿ ರಾಜ್ಯ ಸರ್ಕಾರವನ್ನು ಕೋರಿತ್ತು. ಈ ಉದ್ದಿಮೆ 446 ಕೋಟಿ ಬಂಡವಾಳದ್ದಾಗಿದ್ದು, 500 ಜನರಿಗೆ ಉದ್ಯೋಗಾವಕಾಶ ನೀಡಲಿದೆ.

ಮುತ್ತಯ್ಯ ಮುರಳೀಧನ್ ಈಗಾಗಲೇ ಎರಡು ಬಾರಿ ಧಾರವಾಡಕ್ಕೆ ಬಂದು ಉದ್ದಿಮೆ ಸ್ಥಾಪನೆಯ ಸ್ಥಳ ಪರಿಶೀಲನೆ ಮಾಡಿ ಹೋಗಿದ್ದಾರೆ. ಈ ಸಂಸ್ಥೆ ಮೂರು ಹಂತಗಳಲ್ಲಿ ತನ್ನ ಉದ್ದಿಮೆಯನ್ನು ವಿಸ್ತರಿಸಲಿದ್ದು, ಆರಂಭದ ಹಂತದಲ್ಲಿ 200 ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.

Exit mobile version