Site icon PowerTV

SCP,TSP ಕಾಯ್ದೆ ಬಗ್ಗೆ ಮೊದಲು ಬಿಜೆಪಿಯವರು ಅರ್ಥ ಮಾಡಿಕೊಂಡು ಮಾತನಾಡಲಿ:ಪ್ರಿಯಾಂಕ್​ ಖರ್ಗೆ

ಬೆಂಗಳೂರು : ಜೆಡಿಎಸ್ ನವರೆ ಆಗಲಿ, ಬಿಜೆಪಿ ಯವರೇ ಆಗಲಿ ಮೊದಲು ಎಸ್ಸಿಪಿ, ಟಿಎಸ್​ಪಿ ಆಕ್ಟ್ ನ ಸರಿಯಾಗಿ ಅರ್ಥ ಮಾಡಿಕೊಬೇಕು ಆಮೇಲೆ ಮಾತನಾಡಬೇಕು ಎಂದು ವಿರೋಧ ಪಕ್ಷಗಳಿಗೆ ಸಚಿವ ಪ್ರಿಯಾಂಕ್​ ಖರ್ಗೆಕಿಡಿಕಾರಿದರು.

ಇದನ್ನು ಓದಿ: ಉತ್ತಮ ಸಮಾಜ ಕಟ್ಟಲು ಕೇವಲ ಶಾಸಕ, ಸಂಸದರಿಂದ ಆಗಲ್ಲ: ಯು.ಟಿ ಖಾದರ್

ನಗರದಲ್ಲಿ ಮಾತನಾಡಿದ ಅವರು, ಈ ಹಿಂದಿನ‌ ಬಿಜೆಪಿ ಸರ್ಕಾರ ಇದೇ ಸದನದಲ್ಲಿ ಎಸ್​ಸಿಪಿ, ಟಿಎಸ್​ಪಿ ನಲ್ಲಿರುವ 10 ಸಾವಿರಕ್ಕೂ ಹೆಚ್ಚು ಹಣವನ್ನು ಡೈವರ್ಟ್​ ಮಾಡಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ ಇದಕ್ಕೆ ಎಜಿ ವರದಿ ಸಾಕ್ಷಿ ಇದೆ.

ನಾವು ಬಹಳ ಸ್ಪಷ್ಟವಾಗಿ ಹೇಳ್ತಿದ್ದೇವೆ, ಕಾನೂನು ಪ್ರಕಾರವಾಗಿಯೇ ಎಸ್ಸಿಪಿ, ಟಿಎಸ್ಪಿ ಬೆನಿಫಿಶಿಯರ್ಸ್ ಹಣವನ್ನ ಬಳಕೆ ಮಾಡ್ತಾ ಇದ್ದೇವೆ ಎಂದು, SCP TSP ಹಣವನ್ನು ನಾವು ಈಗ ಬಳಕೆ ಮಾಡಿಕೊಳ್ಳುತ್ತೇವೆ ಎಂದು ಎಲ್ಲಿ ಹೇಳಿದ್ದೇವೆ, ಮೊದಲು ಕಾಯ್ದೆಯನ್ನು ವಿರೋಧ ಪಕ್ಷಗಳು ತಿಳಿದುಕೊಳ್ಳಲಿ ಆಮೇಲೆ ಮಾತನಾಡಲಿ.

ಗ್ಯಾರಂಟಿ ಯೋಜನೆಗಳೂ ರಾಜ್ಯದ ಮೂರು ರಿಂದ ನಾಲ್ಕು ಕೋಟಿ ಜನಕ್ಕೆ ತಲುಪುತ್ತಿದೆ, ಇದರಿಂದಾಗಿ  ಎಲ್ಲಿ ನೆಲ‌ಕಚ್ತೀವೋ ಅಂತಾ ಬಿಜೆಪಿಯವರಿಗೆ ಈಗಾಗಲೇ ಭಯ ಶುರುವಾಗಿರುವುದರಿಂದ  ಈ ರೀತಿ ಆರೋಪ ಮಾಡ್ತಿದ್ದಾರೆ. ನಮ್ಮ ಸರ್ಕಾರ ಎಸ್ ಸಿ , ಎಸ್ ಟಿಗಳಿಗಾಗಿ ಬದ್ದವಾಗಿದೆ ಎಂದು ಅವರು ಹೇಳಿದರು.

Exit mobile version