Site icon PowerTV

ಬೆಂಗಳೂರಿನಲ್ಲಿ ಯುಪಿಎಗೆ ಅಂತ್ಯಸಂಸ್ಕಾರ : ಪ್ರಧಾನಿ ಮೋದಿ

ನವದೆಹಲಿ : ಬೆಂಗಳೂರಿನಲ್ಲಿ ಯುಪಿಎ ಒಕ್ಕೂಟದ ಅಂತ್ಯಸಂಸ್ಕಾರ ಮಾಡಿದ್ದೀರಿ.. ಅಂತಿಮ ಕ್ರಿಯಾ ವಿಧಾನ ಮಾಡಿದ್ದೀರಿ ಎಂದು I.N.D.I.A  ಮೈತ್ರಿಕೂಟದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಗೇಲಿ ಮಾಡಿದರು.

ಅವಿಶ್ವಾಸ ನಿರ್ಣಯದ ಮೇಲೆ ಲೋಕಸಭೆಯಲ್ಲಿ ಮಾತನಾಡಿದ ಅವರು, ವಿಪಕ್ಷಗಳು ಹಳೇ ಗಾಡಿಗೆ ಹೊಸ ಪೋಸ್ಟರ್ ಹಾಕುತ್ತಿದ್ದೀರಿ.. ಹಳೇ ಮಷಿನ್‌ಗೆ ಹೊಸ ಪೇಂಟ್‌ ಹಚ್ಚುತ್ತಿದ್ದೀರಾ? ಎಂದು ಕಾಲೆಳೆದರು.

ನೀವು ಭಾರತವನ್ನೇ ಛಿದ್ರ ಛಿದ್ರ ಮಾಡಿದ್ದೀರಿ. ಹೊಸ ಘಟಬಂಧನ್‌ ಮೂಲಕ ಜನರ ಮುಂದೆ ಹೋಗಿದ್ದೀರಿ. ಅವರಿಗೆ ಈ ದೇಶದ ಸಂಸ್ಕಾರವೇ ಗೊತ್ತಿಲ್ಲ. ನೂತನ ಒಕ್ಕೂಟ ಭಾರತ ಇಬ್ಭಾಗ ಮಾಡುತ್ತೆ. I.N.D.I.A ಹೆಸರಿನಲ್ಲಿ NDA ಇದೆ ಎಂದು ಗುಡುಗಿದರು.

NDA ಮಧ್ಯೆ ಎರಡು I ಸೇರಿಕೊಂಡಿದೆ

NDA ಮಧ್ಯೆ ಎರಡು ‘I’ ಸೇರಿಕೊಂಡಿದೆ. ಒಂದು I-, ಇನ್ನೊಂದು I – ಕಾಂಗ್ರೆಸ್ ವಂಶಾಡಳಿತ. I.N.D.I.A ಅಂತ ಮಾಡಿ ಭಾರತ ಒಡೆದಿದ್ದೀರಿ. ಹೆಸರು ಬದಲಿಸಿ ಆಳ್ವಿಕೆ ನಡೆಸಲು ಮುಂದಾಗಿದ್ದಾರೆ. I.N.D.I.A ಒಕ್ಕೂಟವಲ್ಲ, ದುರಹಂಕಾರದ ಒಕ್ಕೂಟ. ನೀವು ವಂಶವಾದ ರಾಜಕಾರಣದ ಪ್ರತಿಬಿಂಬ ಎಂದು ಮಾತು ಮಾತಿಗೂ ವಿಪಕ್ಷಗಳ ವಿರುದ್ಧ ಮೋದಿ ಘರ್ಜಿಸಿದರು.

ಎಲ್ಲರೂ ಪ್ರಧಾನಿ ರೇಸ್‌ನಲ್ಲಿದ್ದಾರೆ

ಕಾಂಗ್ರೆಸ್‌ನ ಸಂಸ್ಥಾಪಕ ಒಬ್ಬ ವಿದೇಶಿ. ಕಾಂಗ್ರೆಸ್ ಭಾರತದ ಧ್ವಜದ ಮಾದರಿ ಕಳವು ಮಾಡಿದ. ಧ್ವಜ ನೋಡಿದ್ರೆ ವೋಟು ಹಾಕ್ತಾರೆ ಅಂದುಕೊಂಡಿದ್ದಾರೆ. ಕಾಂಗ್ರೆಸ್ ಎಲ್ಲಾ ಆರೋಪ ನಿರಾಕರಿಸುತ್ತಾ ಬಂದಿದೆ. ಇಂಡಿಯಾ ಮೈತ್ರಿಕೂಟ ಅಲ್ಲ, ಅಹಂಕಾರದ ಮೈತ್ರಿಕೂಟ. ಮೈತ್ರಿಕೂಟದಲ್ಲಿರೋದು ಎಲ್ಲರೂ ಪ್ರಧಾನಿ ರೇಸ್‌ನಲ್ಲಿದ್ದಾರೆ ಎಂದು ರಾಹುಲ್​ ಗಾಂಧಿಗೆ ಚಾಟಿ ಬೀಸಿದರು.

Exit mobile version