Site icon PowerTV

ಮಲ್ಪೆ ಬಂದರಿನ ನೀರಿಗೆ ಬಿದ್ದ 1.5 ಲಕ್ಷದ ಐಫೋನ್ ಹುಡುಕಿಕೊಟ್ಟ ಮುಳುಗುತಜ್ಞ

ಉಡುಪಿ: ಮಲ್ಪೆ ಬಂದರಿನ ನೀರಿಗೆ ಬಿದ್ದಿದ್ದ 1.5 ಲಕ್ಷದ ಐಫೋನ್ ಹುಡುಕಿಕೊಟ್ಟರು ಮುಳುಗುತಜ್ಞ  ಈಶ್ವರ್ ಮಲ್ಪೆ.

ಇದನ್ನೂ ಓದಿ: ಧಾರವಾಡದಲ್ಲಿ ಕ್ರಿಕೆಟಿಗ ಮುರಳೀಧರನ್ ಫ್ಯಾಕ್ಟರಿ: 446 ಕೋಟಿ ಹೂಡಿಕೆ

ಮಲ್ಪೆ ಮೀನುಗಾರಿಕೆ ಬಂದರಿನ ಬೇಸಿನ್‌ನಲ್ಲಿ ಹೂಳು ತುಂಬಿಕೊಂಡಿದ್ದು ಕಾಲು ಜಾರಿ ಬಿದ್ದ ಮನುಷ್ಯನ ಮೃತದೇಹವೂ ಸಿಗುವುದು ಕಷ್ಟ. ಅಂಥದ್ದರಲ್ಲಿ ಮುಳುಗುತಜ್ಞ ಈಶ್ವರ್ ಮಲ್ಪೆ ಅವರು ಅಂತಹ ಅಪಾಯಕಾರಿ ಆಳದಲ್ಲಿ ಧುಮುಕಿ 1.5 ಲಕ್ಷ ರೂ. ಮೌಲ್ಯದ ಐ-ಫೋನ್ ಮೊಬೈಲ್ ಹುಡುಕಿ ಮೇಲೆ ತಂದಿದ್ದಾರೆ.

ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ವ್ಯಾಪಾರಿಯೊಬ್ಬರ 1.5 ಲಕ್ಷ ರೂ. ಮೌಲ್ಯದ ಐ-ಫೋನ್ ಮೊಬೈಲ್ ಜೆಟ್ಟಿ ಬಳಿ ನೀರಿಗೆ ಬಿದ್ದಿತ್ತು. ಮೊಬೈಲ್ ಕಳೆದುಕೊಂಡು ಚಿಂತಿತರಾದ ಅವರು ಬೇರೆಯವರ ಸಹಾಯದಿಂದ ಈಶ್ವ‌ರ್ ಮಲ್ಪೆ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

ತತ್‌ಕ್ಷಣ ಧಾವಿಸಿ ಬಂದ ಈಶ್ವ‌ರ್ ಮಲ್ಪೆ ನೀರಿನ ಆಳದಲ್ಲಿ ಹುಡುಕಾಟ ನಡೆಸಿ ಮೊಬೈಲ್‌ನ್ನು ಹೊರತೆಗೆದು ವಾರಸುದಾರರಿಗೆ ನೀಡಿದರು. ನೆರೆದಿದ್ದ ಜನ ಈಶ್ವರ್ ಅವರ ಚಾಕಚಕ್ಯತೆಯನ್ನು ಕೊಂಡಾಡಿದರು.

Exit mobile version