Site icon PowerTV

ನನಗೆ ಪುಕ್ಕಟೆ ಪ್ರಾಚಾರ ಕೊಡ್ತಿದ್ದಾರೆ, ಕೊಡಲಿ : ಚಲುವರಾಯಸ್ವಾಮಿ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ವಿರುದ್ಧ ಕೃಷಿ ಸಚಿವ ಎನ್​. ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಐದು ಗ್ಯಾರಂಟಿ ನೋಡಿ ಜೆಡಿಎಸ್​ ಹಾಗೂ ಬಿಜೆಪಿಗೆ ನಿರಾಸೆ ಆಗಿದೆ. ನನಗೆ ಪ್ರಚಾರ ಕೊಡ್ತಿದ್ದಾರೆ, ಕೊಡಲಿ ಎಂದು ಲೇವಡಿ ಮಾಡಿದ್ದಾರೆ.

ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಿತ್ತು. Pay CM ಅಂತ 40% ಬಿಜೆಪಿ ಬಗ್ಗೆ ಆಂದೋಲನ ನಡೀತು. 135 ಸೀಟು ಗೆದ್ದಿರೋದು ನೋಡಿ ಗಾಬರಿ ಆಗಿದ್ದಾರೆ. ಲೋಕಸಭಾ ಚುನಾವಣೆ ಎದುರಿಸೋಕೆ ಅವರಿಗೆ ಭಯ ಎಂದು ಗುಡುಗಿದ್ದಾರೆ.

Pay CM ಅಂದ್ರೆ ಏನು ಪ್ರಯೋಜನ?

ತಮ್ಮ ವಿರುದ್ಧ ನಕಲಿ(ಫೇಕ್) ಪತ್ರ ಬರೆದಿದ್ದಾರೆ. ಆ ಪತ್ರ ನಕಲಿ ಎಂದು ರಾಜ್ಯಪಾಲರ ಕಚೇರಿ ಅಧಿಕಾರಿಗಳೇ ಹೇಳಿದ್ದಾರೆ. ಆ ಪತ್ರ ಇಟ್ಕೊಂಡು Pay CM, Pay DCM ಅಂದ್ರೆ ಏನು ಪ್ರಯೋಜನ? ನನಗೆ ಪುಕ್ಕಟೆ ಪ್ರಚಾರ ಕೊಡ್ತಿದ್ದಾರೆ ಎಂದು ಚಾಟಿ ಬೀಸಿದ್ದಾರೆ.

ಮಂಡ್ಯದಲ್ಲಿ ಶಾಸಕರು, ಎಂಎಲ್​ಸಿ ಎಲ್ಲಾ ಹತ್ತು ಜನ ಇದ್ರು. ಈಗ ಆರು ಜನ ಶಾಸಕರು, ನಾಲ್ವರು ಎಂಎಸ್ ಸಿಗಳು ಕಾಂಗ್ರೆಸ್ ನವರಿದ್ದಾರೆ. ಪಾಪ ಅವ್ರಿಗೆ ಏನಾಗಬೇಡ ಹೇಳಿ. ನಾವು ಕರೆಕ್ಟ್ ಆಗಿದ್ರೆ ನಾವೇಕೆ ಆಂತಂಕ ಪಡಬೇಕು ಎಂದು ಚಲುವರಾಯಸ್ವಾಮಿ ಕುಟುಕಿದ್ದಾರೆ.

Exit mobile version