Site icon PowerTV

ಕಾಂಗ್ರೆಸ್​ ಶಾಸಕರು ಅಬ್ಬೇಪಾರಿಗಳಾಗಿದ್ದಾರೆ : ಬಿ.ವೈ ವಿಜಯೇಂದ್ರ

ಬೆಂಗಳೂರು : ಶಾಸಕರುಗಳಿಗೆ ಅನುದಾನ ಸಿಗದ ವಿಚಾರ ಕುರಿತು ಶಿಕಾರಿಪುರ ಬಿಜೆಪಿ ಶಾಸಕ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವಿರೋಧ ಪಕ್ಷಗಳ ಶಾಸಕರು ಬಿಟ್ಬಿಡಿ.. ಕಾಂಗ್ರೆಸ್​ ಪಕ್ಷದ ಶಾಸಕರುಗಳೇ ತಮ್ಮ ಕ್ಷೇತ್ರದಲ್ಲಿ ತಲೆ ಎತ್ಕೊಂಡು ಓಡಾಡೋಕೆ ಆಗ್ತಿಲ್ಲ ಎಂದು ಕುಟುಕಿದ್ದಾರೆ.

ಕಾಂಗ್ರೆಸ್ ಶಾಸಕರಿಗೆ ಒಂದು ರಸ್ತೆ ಮಾಡಿಸಲು, ಟಿಸಿ ಹಾಕಿಸಲು ಅನುದಾನ ಇಲ್ಲ. ಅವರ ಪಕ್ಷದ ಶಾಸಕರಿಗೇ ಹಣ ಕೊಡ್ತಿಲ್ಲ. ಆಡಳಿತ ಪಕ್ಷದ ಶಾಸಕರು ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ಇಲ್ಲ. ಈ ಸರ್ಕಾರ ಯಾವ ದಿಕ್ಕಿಗೆ ಸಾಗ್ತಿದೆ? ರಾಜ್ಯವನ್ನು ಸಾಲದ ಕೂಪಕ್ಕೆ ತಳ್ತಿದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಮುಖ್ಯಮಂತ್ರಿ ಪರಿಹಾರ ನಿಧಿಗೆ 4 ಕೋಟಿ ಚೆಕ್​ ವಿತರಣೆ!

ಶಾಸಕರು ಅಬ್ಬೇಪಾರಿಗಳಾಗಿದ್ದಾರೆ

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಕೊಟ್ಟ ಅನುದಾನದಲ್ಲಿ‌ ಕೆಲಸ ಆಗಿದೆ. ಜನ ಈಗಲೂ ಕೂಡಾ ಇದನ್ನು ನೆನಪಿಸಿಕೊಳ್ತಿದಾರೆ. ಈ ವರ್ಷ ಶಾಸಕರಿಗೆ ಅನುದಾನ ನಿರೀಕ್ಷೆ ಮಾಡಕ್ಕಾಗಲ್ಲ. ಕಾಂಗ್ರೆಸ್ ಶಾಸಕರು ಅಬ್ಬೇಪಾರಿಗಳಾಗಿದ್ದಾರೆ. ಜನ ಅಸಹಾಯಕರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

Exit mobile version