Site icon PowerTV

ಮಗಳನ್ನು ಕೊಟ್ಟು ಮದುವೆ ಮಾಡಿಲ್ಲ ಎಂಬ ದ್ವೇಷ ; 850 ಅಡಿಕೆ ಬೆಳೆ ನಾಶ ಮಾಡಿದ ಭೂಪ

ಮೈಸೂರು : ಮಗಳನ್ನು ಕೊಟ್ಟು ಮದುವೆ ಮಾಡಿಲ್ಲ ಎಂಬ ದ್ವೇಷಕ್ಕೆ ಬರೋಬ್ಬರಿ 850 ಅಡಿಕೆ ಗಿಡ ನಾಶ ಮಾಡಿದ ಭೂಪ ಘಟನೆ ಹುಣುಸೂರು ತಾಲೂಕು ಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ವೆಂಕಟೇಶ್ ಪುತ್ರಿಯನ್ನು ಅದೇ ಗ್ರಾಮದ ಅಶೋಕ್ ಎಂಬಾತನಿಗೆ ಕೊಟ್ಟು ವಿವಾಹ ಮಾಡುವ ಮಾತುಕತೆ ನಡೆದಿತ್ತು. ಕೆಲವು ದಿನಗಳ ಬಳಿಕ ಅಶೋಕ್​ನ ವರ್ತನೆಗಳನ್ನು ಕಂಡು ಹುಡುಗ ಸರಿಯಿಲ್ಲ ಎಂದು ಮದುವೆಯನ್ನು ನಿರಾಕರಿಸಿದ ವೆಂಕಟೇಶ್ ಪುತ್ರಿ. ಇದರಿಂದ ವೆಂಕಟೇಶ್ ಕುಟುಂಬವನ್ನು ದ್ವೇಷಿಸುತ್ತಿದ್ದ ಅಶೋಕ್.

ಇದನ್ನು ಓದಿ : 60 ಅಡಿ ಆಳಕ್ಕೆ ಬಿದ್ದ ಕಾಡುಕೋಣದ ಮರಿ!:ರಕ್ಷಣೆ

ನಿನ್ನೆ ರಾತ್ರೋ ರಾತ್ರಿ ವೆಂಕಟೇಶ್​ಗೆ ಸೇರಿದ್ದ ಜಮೀನಿಗೆ ನುಗ್ಗಿದ ಅಶೋಕ್ 850 ಅಡಿಕೆ ಗಿಡಗಳನ್ನು ನಾಶ ಮಾಡಿದ್ದಾನೆ. ಕಷ್ಟ ಪಟ್ಟು ಬಳೆದಿದ್ದ ಅಡಿಕೆ ಗಿಡಗಳನ್ನು ಕಳೆದುಕೊಂಡು ಕಂಗಲಾಗಿರುವ ವೆಂಕಟೇಶ್. ಈ ಘಟನಾ ಹಿನ್ನೆಲೆ ಜಮೀನಿನಲ್ಲಿ ಬೆಳೆ ನಾಶ ಮಾಡಿದ್ದಾನೆಂದು ಗಂಭೀರ ಆರೋಪ ಮಾಡಲಾಗಿದ್ದು, ಹುಣಸೂರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version