Site icon PowerTV

ಬೆಂಗಳೂರಿನಲ್ಲಿ BBMP ಗುತ್ತಿಗೆದಾರ ಆತ್ಮಹತ್ಯೆ

ಬೆಂಗಳೂರು : ಕಾಂಗ್ರೆಸ್ ಸರ್ಕಾರ ಹಾಗೂ ಗುತ್ತಿಗೆದಾರರ ಹಗ್ಗಾಜಗ್ಗಾಟಕ್ಕೆ ಮೊದಲ ಬಲಿಯಾಗಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗೌತಮ್, ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರರಾಗಿದ್ದಾರೆ. ವಿಜಯನಗರದ ನಿವಾಸದಲ್ಲಿ ರಾತ್ರಿಯೇ ಸೂಸೈಡ್ ಆಗಿದೆ. ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣರಾಗಿದ್ದಾರೆ.

ಕಾಮಗಾರಿ ಬಾಕಿ ಬಿಲ್ ಬರದೆ ಮಾನಸಿಕವಾಗಿ ಗೌತಮ್ ನೊಂದಿದ್ದರು ಎನ್ನಲಾಗಿದೆ. ಮೃತ ಗೌತಮ್ ಅವರು ಅತ್ತಿಗುಪ್ಪೆ ಮಾಜಿ ಕಾರ್ಪೊರೇಟರ್ ದೊಡ್ಡಣ್ಣ ಅವರ ಪುತ್ರ ಎಂದು ತಿಳಿದುಬಂದಿದೆ. ಗೌತಮ ಆತ್ಮಹತ್ಯೆ ಮಾಡಿಕೊಂಡ ಮನೆಗೆ ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಭೇಟಿ ನೀಡಿದ್ದಾರೆ.

ಸಿಎಂ ನೋ ರಿಯಾಕ್ಷನ್

ಬಿಬಿಎಂಪಿ ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ನೋ ರಿಯಾಕ್ಷನ್. Nothing To React ಎಂದು ಹೇಳಿ ಹೊರಟಿದ್ದಾರೆ.

Exit mobile version