Site icon PowerTV

ಮೋದಿ ಪ್ರಧಾನಿ ಆಗಲ್ಲ.. ಮಹಿಳೆಗೆ ಮುಂದಿನ PM ಆಗುವ ಯೋಗ

ತುಮಕೂರು : ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸುವಂತಹ ಕಾಲಜ್ಞಾನ ಭವಿಷ್ಯವೊಂದು ಹೊರಬಿದ್ದಿದೆ. ಮುಂದಿನ ಪ್ರಧಾನಿಯಾಗುವ ಯೋಗ ಒಬ್ಬ ಮಹಿಳೆಗೆ ಇದೆ ಎಂದು ಕಾಲಜ್ಞಾನಿ ಡಾ.ಯಶ್ವಂತ ಗುರೂಜಿ ಭವಿಷ್ಯ ನುಡಿದಿದ್ದಾರೆ.

ಒಂದು ಸ್ತ್ರೀ ದೇಶ ಆಳ್ತಾಳೆ, ಮಾರ್ಚ್ ತಿಂಗಳ ನಂತರ ಇದು ಶತಃಸಿದ್ಧ ಎಂದು ತುಮಕೂರಿನ ನೊಣವಿನಕೆರೆಯಲ್ಲಿ ಕಾಲಜ್ಞಾನಿ ಡಾ.ಯಶವಂತ ಗುರೂಜಿ ಸ್ಟೋಟಕ ಭವಿಷ್ಯ ನುಡಿದಿದ್ದಾರೆ.

ಆಶ್ಚರ್ಯದ ಭವಿಷ್ಯ ವಾಣಿ ನುಡಿದ ಯಶ್ವಂತ ಗುರೂಜಿ, ಮಹಾಸಿದ್ಧರು ಬರೆದ ಕಾಲಜ್ಞಾನ ಭವಿಷ್ಯವಾಣಿ ಹೇಳ್ತಿದೆ, ಒಂದು ಶಕ್ತಿ ಅಂದರೆ ಒಬ್ಬ ಸ್ತ್ರೀ ದೇಶವನ್ನ ಮುನ್ನೆಡೆಸುತ್ತಾಳೆ. ಅಂತಹ ಯೋಗ ಮಾರ್ಚ್‌ನ ನಂತರ ಕೂಡಿ ಬರಲಿದೆ. ಇಂದಿರಾಗಾಂಧಿ ನಂತರ ರಾಷ್ಟ್ರ ರಾಜಕಾರಣದ ಚುಕ್ಕಾಣಿಯನ್ನ ಮಹಿಳೆಯೇ ಹಿಡಿಯಲಿದ್ದಾರೆ ಎಂದು ಹೇಳಿದ್ದಾರೆ.

ಮೋದಿಗೆ ಪ್ರಧಾನಿ ಆಗುವ ಅವಕಾಶ?

ಮಹಾಶಿವರಾತ್ರಿ ಹಬ್ಬದ ಒಳಗೆ ಲೋಕಸಭೆ ಚುನಾವಣೆ ನಡೆದರೆ ನರೇಂದ್ರ ಮೋದಿಗೆ ಪ್ರಧಾನಿ ಆಗುವ ಅವಕಾಶವಿದೆ. ಮಾರ್ಚ್ ನಂತರ ಚುನಾವಣೆ ನಡೆದರೆ ಬೇರೆ ಪಕ್ಷ ಅಧಿಕಾರಕ್ಕೆ ಬರುತ್ತದೆ. ಓರ್ವ ಮಹಿಳೆಗೆ ಪ್ರಧಾನಿ ಆಗುವ ಯೋಗವಿದೆ ಎಂದು ತಿಳಿಸಿದ್ದಾರೆ.

ಇಂತಹದ್ದೇ ಪಕ್ಷ ಅಧಿಕಾರದ ಗದ್ದುಗೆ ಏರುತ್ತದೆ. ಇಂತಹ ಮಹಿಳೆಯೇ ದೇಶವನ್ನು ಆಳುತ್ತಾರೆ ಎಂದು ಮಕರ ಸಂಕ್ರಮಣ ಪರ್ವ ಕಾಲದಲ್ಲಿ ಹೇಳಲಾಗುತ್ತದೆ. ಆ ಮಹಿಳೆ ಯಾವುದೇ ಪಕ್ಷದವರು ಆಗಿರಬಹುದು. ದೇಶವನ್ನು ಆ ಮಹಿಳೆ ಆಳುವುದು ಶತಃಸಿದ್ಧ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

Exit mobile version