Site icon PowerTV

ಮಿಸ್ ಆಗಿ ಬೇರೆ ಕ್ಯಾಬ್ ಹತ್ತಿದ್ದ ಮಹಿಳೆ ; ಸಿಟ್ಟಿಗೆದ್ದು ಮಹಿಳೆಗೆ ಹಲ್ಲೆ ಮಾಡಲು ಮುಂದಾದ ಚಾಲಕ

ಬೆಂಗಳೂರು :ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಕ್ಯಾಬ್​ ಬುಕ್ ಮಾಡಿದ್ದ ಮಹಿಳೆ ಡ್ರೈವರ್​ ಹಲ್ಲೆ ಮಾಡಿರುವ ಘಟನೆ ನಗರದ ಬೋಗನಹಳ್ಳಿಯಲ್ಲಿ ನಡೆದಿದೆ.

ನಿನ್ನೆ (ಬುಧುವಾರ) ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಕ್ಯಾಬ್ ಬುಕ್ ಮಾಡಿದ್ದ ಮಹಿಳೆ. ಬುಕ್ ಮಾಡಿದ್ದ ಸ್ಥಳಕ್ಕೆ ಮತ್ತೊಂದು ಕ್ಯಾಬ್ ಬಂದಿತ್ತು. ಇದೇ ವೇಳೆ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಅವಸರದಲ್ಲಿ ಇದೇ ಕ್ಯಾಬ್ ಇರಬೇಕು ಎಂದು ಮಗನನ್ನು ಕರೆದುಕೊಂಡು ಕಾರ್ ಒಳಗೆ ಕುಳಿತ ಮಹಿಳೆ.

ಇದನ್ನು ಓದಿ : ಮುಖ್ಯಮಂತ್ರಿ ಪರಿಹಾರ ನಿಧಿಗೆ 4 ಕೋಟಿ ಚೆಕ್​ ವಿತರಣೆ!

ಬಳಿಕ ಇದು ಬೇರೆ ಕ್ಯಾಬ್ ನಾನು ಬುಕ್ ಮಾಡಿದ್ದಲ್ಲ ಎಂದು ಅರಿತು ಕ್ಯಾಬ್​ನಿಂದ ಇಳಿಯಲು ಮುಂದಾದ ಮಹಿಳೆ. ಈ ವೇಳೆ ಚಾಲಕ ಕಾರು ಚಲಾಯಿಸಿ ಮಹಿಳೆ ಇಳಿಯಲು ಮುಂದಾದರೂ ಸಹ ನಿಲ್ಲಿಸದೇ ಕಾರನ್ನು ಮುಂದೆ ಚಲಾಯಿಸಿದ್ದಾನೆ. ಬಳಿಕ ಮುಂದೆ ಅಪಾರ್ಟ್‌ಮೆಂಟ್ ಮುಂಭಾಗದಲ್ಲೆ ಕ್ಯಾಬ್ ನಿಲ್ಲಿಸಿ ಏಕಾಏಕಿ ಮಹಿಳೆ ತಲೆಗೆ ಹೊಡೆಯಲು ಮುಂದಾಗಿದ್ದಾನೆ.

ಸದ್ಯ ಸ್ಥಳಕ್ಕೆ ಸ್ಥಳೀಯರು ದೌಡಾಯಿಸಿದ್ದು, ಮಹಿಳೆಯನ್ನು ಚಾಲಕನಿಂದ ರಕ್ಷಿಸಿದ್ದಾರೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆ ಬಗ್ಗೆ ಬೆಳ್ಳಂದೂರು ಪೋಲಿಸ್ ಠಾಣೆಗೆ ಮಾಹಿತಿ ನೀಡಿದ ಸ್ಥಳೀಯರು.

Exit mobile version