Site icon PowerTV

ಬಡವನ ಮಗ ಪ್ರಧಾನಿ ಆಗಿದ್ದು ಸಹಿಸಲಾಗ್ತಿಲ್ಲ : ಪ್ರಧಾನಿ ಮೋದಿ

ನವದೆಹಲಿ : ಬಡವನ ಮಗ ದೇಶದ ಪ್ರಧಾನಿ ಆಗಿದ್ದು ಸಹಿಸಲು ಆಗುತ್ತಿಲ್ಲ ಎಂದು ವಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ಕೊಟ್ಟರು.

ಅವಿಶ್ವಾಸ ನಿರ್ಣಯದ ಮೇಲೆ ಲೋಕಸಭೆಯಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಶ್ರೀಮಂತ ವಿಮಾನದಲ್ಲಿ ಓಡಾಡ್ತಿದ್ದ. ಈಗ ಹವಾಯಿ ಚಪ್ಪಲಿ ಹಾಕಿದವನೂ ಓಡಾಡ್ತಾನೆ. ಅಹಂಕಾರ ಇದ್ದವರಿಗೆ ಜನ ಬುದ್ಧಿ ಕಲಿಸುತ್ತಾರೆ ಎಂದು ಕುಟುಕಿದರು.

ತನ್ನದೇ ಅಹಂಕಾರದಿಂದ ಕಾಂಗ್ರೆಸ್‌ ಪಕ್ಷಕ್ಕೆ ಈ ಸ್ಥಿತಿ. ಲಂಕಾ ಹನುಮಂತನಿಂದ ದಹನವಾಗಿಲ್ಲ. ಅದರ ಅಹಂಕಾರದಿಂದ ದಹನವಾಯ್ತು. ಇದೇ ಅಹಂಕಾರದಿಂದ 400ರಿಂದ 40 ಸ್ಥಾನ. ಕುಟುಂಬ ರಾಜಕಾರಣಿಗಳಿಗೆ ನಿದ್ದೆ ಬರ್ತಿಲ್ಲ. ದೇಶದ ಜನತೆ 2024ರಲ್ಲೂ ನಿಮಗೆ ನಿದ್ದೆ ಬಾರದಂತೆ ಮಾಡ್ತಾರೆ ಎಂದು ಮೋದಿ ಎಚ್ಚರಿಕೆಯ ಸಂದೇಶ ರವಾನಿಸಿದರು.

ಹೊಸ ಅಂಗಡಿಗೆ ಶೀಘ್ರದಲ್ಲೇ ಬೀಗ

ಗಾಂಧಿ ಪರಿವಾರ ಸುಳ್ಳಿನ ಮಾರುಕಟ್ಟೆ. ಗಾಂಧಿ ಪರಿಹಾರ ಲೂಟಿ ಅಂಗಡಿ. ಪ್ರಚಾರಕ್ಕಾಗಿ ಹೊಸ ಹೊಸ ಅಂಗಡಿ ಓಪನ್ ಮಾಡ್ತಿದ್ದಾರೆ. ಹೊಸ ಅಂಗಡಿಗೂ ಶೀಘ್ರದಲ್ಲೇ ಬೀಗ ಬೀಳೋದು ಪಕ್ಕಾ. ಮೂಲಂಗಿ ಬೆಳೆಯದವರಿಗೆ ಬೆಳೆ ನೋಡಿದ್ರೆ ಆಶ್ಚರ್ಯ ಆಗುತ್ತೆ. ನಾನು ಅದನ್ನು ನೋಡಿದೆ, ಇದನ್ನ ನೋಡಿದೆ ಅಂತಾರೆ ಎಂದು ಭಾರತ್ ಜೋಡೋ ಬಗ್ಗೆಯೂ ಲೇವಡಿ ಮಾಡಿದರು.

Exit mobile version