Site icon PowerTV

ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ; ಸ್ಥಳದಲ್ಲೇ ಮೃತಪಟ್ಟ ಸವಾರ

ಕಾರವಾರ : ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ನಡೆದಿದೆ.

ಶಿರಸಿ ನಗರದ ದೇವಿಕೆರೆ ನಿವಾಸಿಯಾದ ಗಣೇಶ ಬಾಲಕೃಷ್ಣ ಕರಾಳ (20) ಮೃತಪಟ್ಟ ವ್ಯಕ್ತಿ, ಶಿರಸಿ ನಗರದ ಅಂಬೇಡ್ಕರ್ ಭವನ ರಸ್ತೆಯಿಂದ ಸ್ಕೂಟಿಯಲ್ಲಿ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಇದನ್ನು ಓದಿ : ಮನೆ ಬಾಡಿಗೆ ಕೇಳಿದಕ್ಕೆ ಮಹಿಳೆ ಮೇಲೆ ಹಲ್ಲೆ ಮಾಡಿದ ಬಾಡಿಗೆದಾರ

ಬಸ್ ಚಾಲಕ ಬಸವರಾಜ ಹಾದಿ ಮನೆ ಎಂಬಾತ ಅತೀ ವೇಗದಿಂದ ಚಲಿಸಿಕೊಂಡು ಬಂದಿದ್ದು, ಗಣೇಶ ಎಂಬಾತನ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ಘಟನಾ ಪರಿಣಾಮ ಶಿರಸಿ ಮಾರುಕಟ್ಟೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿನ್ನೆಲೆ ಬಸ್ ಚಾಲಕನನ್ನು ಬಂಧಿಸಿದ ಪೋಲಿಸರು.

Exit mobile version