Site icon PowerTV

ತಂದೆ ಬಿ.ಕೆ. ಶಿವರಾಂ ನಿವಾಸ ತಲುಪಿದ ಸ್ಪಂದನಾ ಪಾರ್ಥಿವ ಶರೀರ

ಬೆಂಗಳೂರು : ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಪಾರ್ಥಿವ ಶರೀರ ತಂದೆ ಬಿ.ಕೆ. ಶಿವರಾಂ ಅವರ ಮಲ್ಲೇಶ್ವರ ನಿವಾಸ ತಲುಪಿದೆ.

ಬ್ಯಾಂಕಾಕ್‌ನಿಂದ ಕಾರ್ಗೋ ವಿಶೇಷ ವಿಮಾನದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾದ ಮೃತದೇಹವನ್ನು ಕಸ್ಟಮ್ಸ್‌ ಕ್ಲಿಯರೆನ್ಸ್‌ ಪ್ರಕ್ರಿಯೆ ಮುಗಿಸಿದರು. ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಿದರು.

ನಟ ವಿಜಯ್ ರಾಘವೇಂದ್ರ ಅವರು ಸಹೋದರ ಶ್ರೀಮುರಳಿ ಹಾಗೂ ತಮ್ಮ ಮಗನೊಂದಿಗೆ ಸ್ಪಂದನಾ ತಂದೆ ನಿವಾಸಕ್ಕೆ ಆಗಮಿಸಿದರು. ಬಳಿಕ, ವಿಮಾನ ನಿಲ್ದಾಣದಿಂದ ಸ್ಪಂದನಾ ಅವರ ಪಾರ್ಥಿವ ಶರೀರವನ್ನು ಆ್ಯಂಬುಲೆನ್ಸ್‌ ಮೂಲಕ ನಿವಾಸಕ್ಕೆ ರವಾನಿಸಲಾಯಿತು.

ನಟ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್ ಸೇರಿದಂತೆ  ಕುಟುಂಬಸ್ಥರು, ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಹಾಗೂ ಸಂಬಂಧಿಕರು ಶಿವರಾಂ ಮನೆ ಬಳಿ ಆಗಮಿಸಿದ್ದಾರೆ.

ಅಂತಿಮ ದರ್ಶನಕ್ಕೆ ಅವಕಾಶ

ತಂದೆ ಬಿ.ಕೆ ಶಿವರಾಂ ಮನೆ ಬಳಿ ಸ್ಪಂದನಾ ಪಾರ್ಥಿವ ಶರೀರನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. ಪೊಲೀಸರು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಬ್ಯಾರಿಕೇಡ್ ಅಳವಡಿಸಿದ್ದಾರೆ. ನಾಳೆ ಮಧ್ಯಾಹ್ನದ ಬಳಿಕ ಹರಿಶ್ಚಂದ್ರಘಾಟ್​​​ನಲ್ಲಿ ಈಡಿಗ ಸಂಪ್ರದಾಯದಂತೆಯೇ ಅಂತಿಮ ಸಂಸ್ಕಾರ ನಡೆಯಲಿದೆ.

Exit mobile version