Site icon PowerTV

ಪಂಚಭೂತಗಳಲ್ಲಿ ಲೀನರಾದ ಸ್ಪಂದನಾ

ಬೆಂಗಳೂರು : ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ.

ಬೆಂಗಳೂರಿನ ಶ್ರೀರಾಂಪುರದಲ್ಲಿರುವ ಹರಿಶ್ಚಂದ್ರ ಘಾಟ್​ನಲ್ಲಿ ಪುತ್ರ ಶೌರ್ಯ ಈಡಿಗ ಸಂಪ್ರದಾಯದಂತೆ ತಾಯಿ ಸ್ಪಂದನಾಗೆ ಅಂತಿಮ ವೀಧಿ-ವಿಧಾನಗಳನ್ನು ಪೂರೈಸಿದರು.

ಆ ಬಳಿಕ ವಿದ್ಯುತ್ ಚಿತಾಗಾರದಲ್ಲಿ ಸ್ಪಂದನಾ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು. ಈ ಸಂದರ್ಭದಲ್ಲಿ ಪತಿ ವಿಜಯ್ ರಾಘವೇಂದ್ರ, ಸಹೋದರ ಶ್ರೀಮುರುಳಿ, ಸ್ಪಂದನಾ ತಂದೆ ಬಿ.ಕೆ ಶಿವರಾಂ, ಚಿಕ್ಕಪ್ಪ ಬಿ.ಕೆ ಹರಿಪ್ರಸಾದ್, ನಟ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗೂ ಸಂಬಂಧಿಕರು ಉಪಸ್ಥಿತರಿದ್ದರು.

ಪುತ್ರ ಶೌರ್ಯ ಕಣ್ಣೀರು

ತಾಯಿ ಸ್ಪಂದನಾ ಪಾರ್ಥಿವ ಶರೀರದ ಬಳಿ ಪುತ್ರ ಶೌರ್ಯ ವಿಜಯ್ ರಾಘವೇಂದ್ರ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಈ ದೃಶ್ಯ ಮನಕಲುಕುವಂತಿತ್ತು. ಅಪ್ಪ ವಿಜಯ್ ರಾಘವೇಂದ್ರ ಹಾಗೂ ಚಿಕ್ಕಪ್ಪ ಶ್ರೀಮುರುಳಿ ಶೌರ್ಯನನ್ನು ತಬ್ಬಿ ಕಣ್ಣೀರು ಒರೆಸಿ, ಸಂತೈಸುವ ಪ್ರಯತ್ನ ಮಾಡಿದರು.

Exit mobile version