Site icon PowerTV

ಹಾಡಹಗಲೇ ಹಾಸನದಲ್ಲಿ ರೇವಣ್ಣರ ಆಪ್ತನ ಹತ್ಯೆ

ಹಾಸನ : ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಆಪ್ತನಾಗಿರುವ ಗ್ರ್ಯಾನೈಟ್‌ ಉದ್ಯಮಿ ಕೃಷ್ಣೇಗೌಡನನ್ನು ಹಾಡಹಗಲೇ ರೌಡಿಗಳು ಕೊಚ್ಚಿ ಕೊಲೆ ಮಾಡಿರುವ ದುರ್ಘಟನೆ ಹಾಸನದಲ್ಲಿ ನಡೆದಿದೆ.

ರಾಜ್ಯದ ರಾಜಧಾನಿ ಬೆಂಗಳೂರು, ಕರಾವಳಿ ತೀರದ ಮಂಗಳೂರು, ವಿಜಯಪುರದ ಭೀಮಾತೀರ, ಮಲೆನಾಡು ಹೆಬ್ಬಾಗಿಲು ಶಿವಮೊಗ್ಗದಲ್ಲಿ ಹೆಚ್ಚಾಗಿದ್ದ ಹಾಡಹಗಲೇ ಮಚ್ಚು ಬೀಸಿ ಕೊಲೆ ಮಾಡುವ ಪ್ರಕರಣ ಈಗ ಹಾಸನಕ್ಕೂ ಕಾಲಿಟ್ಟಿದೆ.

ಪ್ರಧಾನಿ ಹೆಚ್.ಡಿ. ದೇವೇಗೌಡರ ತವರು ಕ್ಷೇತ್ರ ಹಾಸನದಲ್ಲಿ ರೌಡಿಗಳ ಅಟ್ಟಹಾಸವಿರಲಿಲ್ಲ. ಆದರೆ, ಈಗ ಹಾಡುಹಗಲೇ ಹಾಸನ ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಗ್ರ್ಯಾನೈಟ್ ಉದ್ಯಮಿ ಹತ್ಯೆ ಮಾಡಲಾಗಿದೆ.

ತಮ್ಮ ಸ್ವಂತ ಗ್ರ್ಯಾನೈಟ್‌ ಫ್ಯಾಕ್ಟರಿಗೆ ಬೆಳಗ್ಗೆ ಪ್ರತಿನಿತ್ಯದ ಮಾದರಿಯಲ್ಲಿ ಹೋಗಿದ್ದಾರೆ. ಆಗ, ರಸ್ತೆಯ ಬದಿಯಲ್ಲಿ ಕಾರನ್ನು ನಿಲ್ಲಿಸಿದ, ಕಾರಿನಿಂದ ಇಳಿದ ಕೃಷ್ಣೇಗೌಡನನ್ನು ಏಕಾಏಕಿ ಧಾಳಿ ಮಾಡಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.

ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಎಸ್ಪಿ ಹರಿರಾಮ್ ಶಂಕರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರಿಸಿರುವ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

Exit mobile version